ಬೆಂಗಳೂರು : ನೀವು ಕೋವಿಡ್ ವ್ಯಾಕ್ಸಿನೇಷನ್ ಪಡೆದಿದ್ದರೆ . ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಬೇಕಾಗಿದ್ದರ ನೀವು ಮಾಡಬೇಕಾಗಿದ್ದರೆ ಏನಾದರೂ ಸಮಸ್ಯೆಯಾಗಿದ್ದರೆ. ಮೊಬೈಲ್ಗೆ ಬಂದಿದ್ದ ಲಿಂಕ್ ಡಿಲೀಟ್ ಆಗಬಿಟ್ಟಿದೆ. ಹೇಗಪ್ಪಾ ಡೌನ್ಲೋಡ್ ಮಾಡಿಕೊಳ್ಳೋದು ಎಂದು ಚಿಂತೆ ಮಾಡ್ತಿದ್ರೆ ಒಮ್ಮೆ ಹೀಗೆ ಮಾಡಿ..
ಹೊಸ ಫೀಚರ್ನೊಂದಿಗೆ MyGov corona helpdesk ನಿಮ್ಮ ಸಹಾಯಕ್ಕೆ ಬಂದಿದೆ. ವಾಟ್ಸ್‌ಆ್ಯಪ್ ಇದ್ದರೆ ಬಹಳ ಸುಲಭವಾಗಿ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.ಇದಕ್ಕೆ ಮಾಡಬೇಕಿರುವುದು ಬಹಳ ಸಿಂಪಲ್, ನಿಮ್ಮ ವಾಟ್ಸ್‌ಆ್ಯಪ್ ಮೂಲಕ 9013151515 ಈ ನಂಬರ್ಗೆ COVID certificate ಅಂತಾ ಟೈಪ್ ಮಾಡಿ ನಂತರ ನಿಮ್ಮ ರಿಜಿಸ್ಟ್ರೇಷನ್ ನಂಬರ್ಗೆ ಓಟಿಪಿ ಬರುತ್ತೆ.ಅದನ್ನು ಟೈಪ್ ಮಾಡಿ ನಂತರ ನಿಮ್ಮ ಹೆಸರು ಬರುತ್ತದೆ. ಅದು ಸರಿ ಇದ್ದರೆ 1 ಅಂತಾ ಟೈಪ್ ಮಾಡಿದರೆ ಆಯ್ತು, ಪಿಡಿಎಫ್ ಫಾರ್ಮೆಟ್ ಇರುವ ಸರ್ಟಿಫಿಕೇಟ್ ನಿಮ್ಮ ವಾಟ್ಸ್ಆ್ಯಪ್ಗೆ ಬರುತ್ತದೆ.ಮೊದಲ ಡೋಸ್ ಪಡೆದಿದ್ದರೆ ಅದರ ಸರ್ಟಿಫಿಕೇಟ್ ಬಂದು, ಅದರಲ್ಲಿ ನೀವೂ ಪಡೆದ ದಿನಾಂಕ, ಲಸಿಕೆ ಹೆಸರು, ಮುಂದಿನ ಲಸಿಕೆ ದಿನಾಂಕ, ಲಸಿಕೆ ನೀಡಿದವರು, ಲಸಿಕೆ ಹಾಕಿದ ಸ್ಥಳ ಎಲ್ಲಾ ಮಾಹಿತಿ ನಿಮಗೆ ಸುಲಭವಾಗಿ ಸಿಗಲಿದೆ. ಹಾಗೆಯೇ, ಎರಡನೆ ಡೋಸ್ ಪಡೆದವರು ಸರ್ಟಿಫಿಕೇಟ್ ತೆಗೆದುಕೊಳ್ಳಬಹುದಾಗಿದೆ. ನಿನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಸಹ ತಿಳಿಸಿ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …