ಹುಬ್ಬಳ್ಳಿ; ಕಾರಿನ ಮುಂದಿನ ಗಾಲಿ ಬ್ಲಾಸ್ಟ್ ಆಗಿ ಪ್ಲೈಓವರ್ ಕಾಲಂಗೆ ಹೊಡೆದ ಪರಿಣಾಮ ಬಿಜೆಪಿ ಮುಖಂಡ ರಾಜಣ್ಣ ಕೊರವಿಗೆ ಸಣ್ಣಪುಟ್ಟ ಗಾಯವಾದ ಘಟನೆ ಭಾನುವಾರ ತಡರಾತ್ರಿ ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ ಬಳಿ ನಡೆದಿದೆ.
ರಾಜಣ್ಣ ಕೊರವಿ ಪ್ರಯಾಣಿಸುತಿದ್ದ ಕಾರು ಏಕಾಏಕಿ ಕಾರಿನ ಗಾಲಿ ಬ್ಲ್ಯಾಸ್ಟ್ ಆಗಿದ್ದು ನಿಯಂತ್ರಣ ತಪ್ಪಿದ ಪರಿಣಾಮವಾಗಿ ಎದುರಿಗೆ ಇರುವ ಪ್ಲೈಓವರಗೆ ಕಾಲಂಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರಿನಲ್ಲಿದ್ದ ರಾಜಣ್ಣ ಕೊರವಿಗೆ ಸಣ್ಣಪುಟ್ಟ ಗಾಯವಾಗಿದ್ದು ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಪ್ರಾಣಾಪಯದಿಂದ ಪಾರು ಆಗಿದ್ದಾರೆ.
ತಕ್ಷಣ ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ ಯಾರು ಚಲಾವಣೆ ಮಾಡುತಿದ್ದರು ಎಂದು ಸಹ ಗೊತ್ತಾಗಿಲ್ಲ. ಈ ಬಗ್ಗೆ ಕಾರಣ ತನಿಖೆ ನಂತರ ತಿಳಿದುಬರಲಿದೆ.
ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತಿದ್ದಾರೆ.
