ದಾವಣಗೆರೆ: ಪತ್ರಕರ್ತ ಹಾಗೂ ಪತ್ರಿಕೆಯ ಪುಟ ವಿನ್ಯಾಸ ತಂತ್ರಜ್ಞ ಎಚ್.ಎನ್. ಮುನೇಶ್ (52) ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದ ಹಿಂದೆ ನಗರದ ಸಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಹಾಗೂ ಒರ್ವ ಪುತ್ರಿ, ಅಪಾರ ಬಂದು-ಬಳಗ, ಗೆಳೆಯರನ್ನು ಅಗಲಿದ್ದಾರೆ. ಅವರ ಹುಟ್ಟೂರು ದಾವಣಗೆರೆ ತಾಲೂಕಿನ ಬಾಡಾ ಗ್ರಾಮದದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಪುಟ ವಿನ್ಯಾಸದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮುನೇಶ್ ಸಂಜೆವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಭಾರತಿ, ವಿಶ್ವವಾಣಿ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಈಗ ಈ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕರ್ತವ್ಯ ರ್ನಿವಹಿಸುತ್ತಿದ್ದರು.
ಮುನೇಶ್ ನಿಧನಕ್ಕೆ ಜಿಲ್ಲಾ ವರದಿಗಾರರ ಕೂಟ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.
