Breaking News

ಹುಟ್ಟೂರಿನಲ್ಲಿ ಒಂಟಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

Spread the love

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕದನ ಕುತೂಹಲ ನಡುವೆ ರಾಜಾಹುಲಿ ಮಾನಸ ಪುತ್ರ ಬಸವರಾಜ ಬೊಮ್ಮಾಯಿ‌ ಅವರು ಅಚ್ಚರಿಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ
ನೂತನ ಮುಖ್ಯಮಂತ್ರಿಯಾಗಿ ಮೊದಲ ಭಾರಿಗೆ ತವರು ಜಿಲ್ಲೆ ಜೊತೆಗೆ ಹುಟ್ಟಿದ ಊರು ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಸ್ವಪಕ್ಷಿಯರ ಅಸಮಾ ಧಾನದಿಂದ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆ ಕಾಡುತಿದೆ‌. ಬೊಮ್ಮಾಯಿ ಅವರು ಆಗಮನದ ವೇಳೆ ಬಿಜೆಪಿ ಮುಖಂಡರು ಬಾರದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಸಿಎಂ ಬೊಮ್ಮಾಯಿಯಿಂದ ಇಲ್ಲಿನ ನಾಯಕರು ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇತ್ತ ಸಿಎಂ ಜೊತೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಧಾರವಾಡ ಪಶ್ಚಿಮ‌ ಶಾಸಕ ಅರವಿಂದ ಬೆಲ್ಲದ್, ಕಲಘಟಗಿ ಶಾಸಕ ನಿಂಬಣ್ಣನವರ್, ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ‌ ಶಂಕರ ಪಾಟೀಲ್ ಮುನೇನಕೊಪ್ಪ, ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಮಾಜಿ ಎಂಎಲ್​ಸಿ ಶಂಕರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿಎಂ ಬೊಮ್ಮಾಯಿಯಿಂದ ದೂರ ಉಳಿದಿದ್ದರು. ಬೊಮ್ಮಾಯಿ ಸಿಎಂ ಆಯ್ಕೆ ಆದಾಗಲು ವಿಜಯೋತ್ಸವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ. ಕೇವಲ ಬೊಮ್ಮಾಯಿ ಅಭಿಮಾನಿಗಳು ಮಾತ್ರ ಸಂಭ್ರಮಾಚರಣೆ ಮಾಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ, ಜೆಡಿಎಸ್ ನಾಯಕ ಹಾಗೂ ಸಭಾಪತಿ ಬಸವರಾಜ್ ಹೊರಟ್ಟಿ ಆಗಮಿಸಿ ಶುಭ ಕೋರಿದರು. ಇದಲ್ಲದೇ ಬೊಮ್ಮಾಯಿ ಅಭಿಮಾನಿಗಳು, ಶಿಗ್ಗಾಂವ – ಸವಣೂರು ಹಾಗೂ ಹಾವೇರಿ ಬಿಜೆಪಿ ಕಾರ್ಯಕರ್ತರಿಂದ ಸಿಎಂಗೆ ಸ್ವಾಗತ ಕೋರಲಾಯಿತೇ ವಿನಃ ಇಲ್ಲಿನ ಜನನಾಯಕರು ಮಾತ್ರ ಅಂತರ ಕಾಪಾಡಿಕೊಂಡಿದ್ದಾರೆ.ಇದಲ್ಲದೇ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಬೆಂಬಲಿಗ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾತ್ರ ದೂರ ಉಳಿದಿದ್ದಾರೆ. ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಲು ಇಷ್ಟಪಡುವುದಿಲ್ಲ ಎಂದು ಜಗದೀಶ್​ ಶೆಟ್ಟರ್ ಹೇಳಿಕೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಏಕಾಂಗಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಭಿನ್ನಾಭಿಪ್ರಾಯ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾಲವೇ ಉತ್ತರ ನೀಡುತ್ತದೆ.


Spread the love

About Karnataka Junction

    Check Also

    ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧ-‌ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಭಾರತೀಯ ಜನತಾ ಪಕ್ಷ ಯಾವಾಗಲೂ ಸಿದ್ಧವಿದ್ದು ಈ …

    Leave a Reply

    error: Content is protected !!