ಹುಬ್ಬಳ್ಳಿ; ರಾಜ್ಯದ ನೂತನ ಸಿಎಂ ಆಗಿ, ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿ ಮಂಗಳವಾರ ಬಸವರಾಜ ಬೊಮ್ಮಾಯಿ ಅವರ ಸಂಬಂದಿಕರು ಹಾಗೂ ಅಭಿಮಾನಿಗಳು ಪಟಾಕಿ ಹಾರಿಸುತ್ತ, ಬೊಮ್ಮಾಯಿ ಅವರಿಗೆ ಜೈಕಾರ ಹಾಕುತ್ತಾ ಖುಷಿಯಿಂದ, ಸಂಭ್ರಮಾಚರಣೆ ಮಾಡಿದರು.
ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ, ನೂತನ ಸಿಎಂ ವಿಚಾರದಲ್ಲಿ ತೆರೆ ಬಿದ್ದಿದ್ದು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆಯೇ, ಇತ್ತ ಬೊಮ್ಮಾಯಿ ಅವರ ತಾಯಿ ಮತ್ತು ಅವರ ಅಪಾರ ಬಂಧು ಬಳಗವಿರುವ ಗ್ರಾಮವಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಸವರಾಜ ಬೊಮ್ಮಯಿ ಅವರ ಭಾವ ಚಿತ್ರ ಹಿಡಿದು, ಜೈಕಾರ ಹಾಕುತ್ತಾ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
