Breaking News

ಹುಬ್ಬಳ್ಳಿ: ಬಿಐಎಸ್‌ ಮುದ್ರೆ ದುರ್ಬಳಕೆ- ಅಂಗಡಿ ಮೇಲೆ ದಾಳಿ

Spread the love

 

ಹುಬ್ಬಳ್ಳಿ: ಭಾರತೀಯ ಮಾನಕ ಬ್ಯುರೊ (ಬಿಐಎಸ್‌) ಮುದ್ರೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ನಗರದ ಅಂಗಡಿಯೊಂದರ ಮೇಲೆ ಬಿಐಎಸ್ ಅಧಿಕಾರಿಗಳು Ψದಾಳಿ ನಡೆಸಿದ್ದಾರೆ.
ದುರ್ಗದ ಬೈಲ್‌ನ ಗೌಳಿ ಗಲ್ಲಿಯ ಗುಡಿ ಕಾಂಪ್ಲೆಕ್ಸ್‌ನಲ್ಲಿರುವ ಶುಭಂ ಕ್ವಾಲಿಟಿ ಹಾಲ್‌ಮಾರ್ಕ್ ಸೆಂಟರ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಬಿಐಎಸ್‌ ನಕಲಿ ಮುದ್ರೆ ಹೊಂದಿದ 46 ಗ್ರಾಂ ಚಿನ್ನಾಭರಣ ಹಾಗೂ ನಕಲಿ ಮುದ್ರೆ ಹಾಕಲು ಬಳಸುತ್ತಿದ್ದ ಲೇಸರ್ ಮಾರ್ಕಿಂಗ್ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಬಿಐಎಸ್ ಹುಬ್ಬಳ್ಳಿ ಶಾಖೆಯ ಮುಖ್ಯಸ್ಥ ಹಾಗೂ ವಿಜ್ಞಾನಿ (ಇ) ಡಿ.ಪಿ. ಕುಮಾರ್ ಮತ್ತು ವಿಜ್ಞಾನಿ (ಡಿ) ರಾಕೇಶ್ ತಣ್ಣೀರು ಮಾರ್ಗದರ್ಶನದಲ್ಲಿ ವಿಜ್ಞಾನಿ (ಬಿ) ಸೌವಿಕ್ ಎಸ್. ಮತ್ತು ಸೆಕ್ಷನ್ ಅಧಿಕಾರಿ ಎ.ಸಿ. ಪೂಜಾರಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಆಧರಿಸಿ, ಭಾರತೀಯ ಮಾನಕ ಬ್ಯುರೊ ಕಾಯ್ದೆ–2016ರಡಿ ಸೆಂಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಕಾಯ್ದೆಯಡಿ ತಪ್ಪು ಎಸಗಿದ ಸೆಂಟರ್ ಮಾಲೀಕರಿಗೆ ಜೈಲು ಶಿಕ್ಷೆ ಜತೆಗೆ, ₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.
ಕೇಂದ್ರ ಸರ್ಕಾರವು ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳ ಮಾರಾಟವನ್ನು ಜೂನ್‌ ತಿಂಗಳಿಂದ ಕಡ್ಡಾಯ ಮಾಡಿದೆ. ಗ್ರಾಹಕರು BISCARE ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ತಾವು ಖರೀದಿಸುವ ಚಿನ್ನಾಭರಣದ ಬಿಐಎಸ್ ಮುದ್ರೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದಾಗಿದೆ. ಆ್ಯಪ್ ಅಥವಾ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಜಾಲತಾಣದ ಮೂಲಕ ದೂರು ಕೂಡ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

About gcsteam

    Check Also

    ಮಗು ಮಾತನಾಡಿಸಿ ಖುಷಿ ಪಟ್ಟ ಸಿಎಂ ಸಿದ್ದರಾಮಯ್ಯಾ

    Spread the loveಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ಏರ್ ಪೋರ್ಟ್ ನಲ್ಲಿ ಮಗುವೊಂದನ್ನ ಮಾತನಾಡಿಸಿ ಖುಷಿ ಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯಾನವರು …

    Leave a Reply