ಬೆಂಗಳೂರು: ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದ ಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಹೌದು ಸಿಎಂ ಬಿಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ
ಕಳೆದ ಕೆಲ ಸಮಯದಿಂದ ರಾಜ್ಯ ಮುಖ್ಯಮಂತ್ರಿ ಸಿಎಂ ಬಿ. ಎಸ್. ಯಡಿಯತೂರಪ್ಪ ಬದಲಾಗುತ್ತಾರೆಂಬ ವಿಚಾರ ಸದ್ದು ಮಾಡಿತ್ತು. ಹೀಗಿರುವಾಗ ಅವರ ಬದಲು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದಕ್ಕೆ ತಕ್ಕಂತೆ ಬಿಜೆಪಿ ಹೈಕಮಾಂಡ್ ಏನು ಹೇಳುತ್ತೋ ನಾನು ಹಾಗೇ ನಡೆದುಕೊಳ್ಳುತ್ತೇನೆ ಎಂದಿದ್ದ ಬಿಎಸ್‌ವೈ ಮಾತುಗಳು ಅನೇಕ ಬಗೆಯ ಸಂಶಯಕ್ಕೆ ಕಾರಣಮತ್ವಾತಗಿದ್ದವು. ಬಳಿಕ ನಡೆದ ಕಾವಿ ಬೆಂಬಲ, ಬಿಎಸ್‌ವೈ ಪುತ್ರನ ದೆಹಲಿ ಭೇಟಿ ಇವೆಲ್ಲವೂ ಅನೇಕ ವದಂತಿಗಳಿಗೆ ಸಾಕ್ಷಿಯಾಗಿದ್ದವು.
ಆದರೀಗ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷ ಪೂರೈಸುವ ಸಂದರ್ಭದಲ್ಲೇ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಲಾಗಿದ್ದ ಸಾಧನಾ ಸಮೇವೇಶದಲ್ಲಿ ಮಾತನಾಡಿದ ಬಿಎಸ್‌ವೈ ಕೆಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ನಾನು ನಿಮ್ಮ ಅಪ್ಪಣೆ ಪಡೆದು, ತೀರ್ಮಾನ ಮಾಡಿದ್ದೇನೆ. ಊಟದ ಬಳಿಕ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಲು ತೀರ್ಮಾನ ಮಾಡಿದ್ದೇನೆ. ದುಃಖದಿಂದ ಅಲ್ಲ, ಸಂತೋಷ, ಖುಷಿಯಿಂದ ತೀರ್ಮಾನಿಸಿದ್ದೇನೆ. 75 ವರ್ಷ ದಾಟಿದ ಯಡಿಯೂರಪ್ಪನಿಗೆ ಮತ್ತೆರಡು ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮೋದಿ, ಅಮಿತ್ ಶಾ ಹಾಗೂ ನಡ್ಡಾರವರಿಗೆ ಋಣಿಯಾಗಿದ್ದೇನೆ ಎಂದಿದ್ದಾರೆ.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …