ಹುಬ್ಬಳ್ಳಿ; ಕೊರೊನಾ ಎರಡನೇ ಅಲೆಯ ಸಂಕಷ್ಟ ಹಾಗೂ ಮೂರನೇ ಅಲೆ ಬರಬಹುದೆನ್ನುವ ಭೀತಿಯ ನಡುವೆ ಶಿಕ್ಷಣ ಸಚಿವ ಸುರೇಶಕುಮಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಹೇಳಿಕೆ ಗೊಂದಲಕ್ಕೀಡು ಮಾಡಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿ ವಕ್ತಾರ ಗಂಗಾಧರ ದೊಡವಾಡ ಆರೋಪಿಸಿದರು.
ಉಣಕಲ್ ನಲ್ಲಿ ಸೋಮವಾರ ಮಾತನಾಡಿದ ಅವರು,
ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದುಪಡಿಸಿದ ಕೇಂದ್ರ ಸರ್ಕಾರದ ನಡೆಯನ್ನೇ ಅನುಸರಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು. ಈಗಾಗಲೇ ಮಕ್ಕಳ ಮೇಲೆ ಕರೋನಾ ವ್ಯತಿರಿಕ್ತವಾದ ಪರಿಣಾಮ ಬೀರುವ ಸಾಧ್ಯತೆ ಇದ್ದು ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದಲೂ ವರದಿ ಸಲ್ಲಿಕೆಯಾಗಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಗೊಳಿಸಬೇಕೆಂದು ಆಗ್ರಹಿಸಲಾಗಿದೆ.ಇನ್ನೇನು ಶೈಕ್ಷಣಿಕ ವರ್ಷ ಆರಂಭಿಕ್ಕೆ ಕೇಲವೇ ದಿನಗಳು ಬಾಕಿ ಇವೆ ಆದಷ್ಟು ಬೇಗಾ ಈ ಕುರಿತು ನಿರ್ಧಾರ ಕೈಗೊಳ್ಳಲು ಆಗ್ರಹಿಸಿದರು.
