ರಾಜ್ಯದಲ್ಲಿ ಸುರಿದ ವರ್ಷಧಾರೆಗೆ ಈವರೆಗೆ 9 ಮಂದಿ ಸಾವು 283 ಗ್ರಾಮಗಳು ನೆರೆ ಪೀಡಿತ

Spread the love

ಬೆಂಗಳೂರು: ಮಳೆಯಿಂದ ರಾಜ್ಯದಲ್ಲಿ ಇದುವರೆಗೆ 9 ಜನರು ಸಾವನ್ನಪ್ಪಿದ್ದು, 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಸಂಕಷ್ಟ ಎದುರಾಗಿದೆ. ಸುಮಾರು 283 ಗ್ರಾಮಗಳಿಗೆ ಮಳೆಯಿಂದ ಭಾರೀ ಹಾನಿ ಸಂಭವಿಸಿವೆ. 36,498 ಜನರು ಪ್ರವಾಹದಿಂದಾಗಿ ಸಮಸ್ಯೆಗೀಡಾಗಿದ್ದು, ಇದುವರೆಗೆ 3 ಜನರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮಳೆಗೆ 134 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2,480 ಮನೆಗಳು ಭಾಗಶ: ಹಾನಿಗೀಡಾಗಿವೆ. 78 ಜಾನುವಾರುಗಳು ಸಾವನ್ನಪ್ಪಿವೆ. ಇದುವರೆಗೆ 31,360 ಜನರನ್ನು ಸ್ಥಳಾಂತರಿಸಲಾಗಿದೆ. 237 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 22,417 ಜನರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗಿದೆ.ಇನ್ನು, ಪ್ರವಾಹದಿಂದಾಗಿ ರಾಜ್ಯದಲ್ಲಿ 58,960 ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. 1,962 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಕೂಡ ನಾಶವಾಗಿವೆ. ಸುಮಾರು 555 ಕಿ.ಮೀ ರಸ್ತೆ ಹಾನಿಯಾಗಿದ್ದು, ರಾಜ್ಯದ ವಿವಿಧೆಡೆ 123 ಸೇತುವೆಗಳು ಕೊಚ್ಚಿ ಹೋಗಿವೆ.ಪ್ರವಾಹದಿಂದಾಗಿ 213 ಶಾಲೆಗಳಿಗೆ ಭಾರಿ ಹಾನಿಯಾಗಿದ್ದು, 33 ಆರೋಗ್ಯ ಕೇಂದ್ರಗಳಿಗೂ ತೊಂದರೆಯಾಗಿದೆ.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply