ಹುಬ್ಬಳ್ಳಿ ; ನಗರದ ಮಯೂರ ಎಸ್ಟೇಟ್ ನಲ್ಲಿನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಶನಿವಾರ ಭೇಟಿ ಮಾತುಕತೆ
ನಡೆಸುತಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಈಗ ಭಾರೀ ಚರ್ಚೆಯಲ್ಲಿರುವುದರಿಂದ ಅದರಲ್ಲೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಮುಖ್ಯಮಂತ್ರಿ ರೇಸ್ ನಲ್ಲಿ ಮೊದಲ ಹೆಸರು ಕೇಳಿಬರುತ್ತಿರುವುದರಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಗೆ ಗ್ರಾಸವಾಗುವಂತಹದು. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಭಾರೀ ಅಳೆದು ತೊಗಿ ಆಯ್ಕೆ ನಿರ್ಧಾರ ತೆಗೆದುಕೊಳ್ಳುತಿದೆ. ಆದ್ದರಿಂದ ಇನ್ನೊಂದು ಪ್ರಮುಖ ವಿಚಾರ ಎಂದರೆ ಲಿಂಗಾಯತ ವರ್ಗಕ್ಕೆ ಸೇರಿದವರನ್ನು ಆಯ್ಕೆ ಮಾಡುವುದಾದರೆ ಸಂಸದ ಶಿವಕುಮಾರ್ ಉದಾಸಿ ಅವರ ಹೆಸರು ಸಹ ಮುಂಚೂಣಿಯಲ್ಲಿದೆ. ಆದ್ದರಿಂದ ಶಿವಕುಮಾರ್ ಉದಾಸಿ ಅವರ ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉತ್ತಮ ಸಂಬಂಧ ಸಹ ಹೊಂದಿದ್ದಾರೆ. ಕಾರಣ ಶಿವಕುಮಾರ್ ಉದಾಸಿ ಅವರನ್ನು ಸೈಡ್ ಲೈನ್ ಮಾಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತುಕತೆ ನಡೆಸಿದ್ದಾರೆ ಎಂದರೆ ಅದು ತಪ್ಪಲ್ಲ. ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಪ್ರಲ್ಹಾದ್ ಜೋಶಿ ಅವರು ಮುಖ್ಯಮಂತ್ರಿ ರೇಸ್ ನಲ್ಲಿ ಇರುವ ಬಗ್ಗೆ ಪ್ರತಿಕ್ರಿಯೆ ನೀಡುವಾಗ ನಗು ನಗುತ್ತೇಲೇ ಉತ್ತರ ನೀಡಿದ್ದು ಸಹ ಇದಕ್ಕೆ ಪುಷ್ಠಿ ಕೊಡುತ್ತದೆ. ಇನ್ನು ಕಳೆದ ಕೇಲ ದಿನಗಳ ಹಿಂದೆ ಸಹ ಖಾಸಗಿ ಹೊಟೇಲ್ ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ, ಶಾಸಕ ರಮೇಶ ಜಾರಕಿಹೊಳಿ ಸೇರಿದ್ದು ಇಲ್ಲಿ ಸ್ಮರಿಸಿಬಹುದು.
