ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಮೇಜರ್ ಸರ್ಜರಿ ಮಾಡಿದ್ದು 209 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದ್ದು ತಕ್ಷಣವೇ ವರದಿ ಮಾಡಿಕೊಳ್ಳಲು ಹುಧಾ ಪೊಲೀಸ್ ಕಮಿಷನರ್ ಲಾಬೂರಾಮ್ ತಿಳಿಸಿದ್ದಾರೆ.
ನಿವೃತ್ತಿ ಅಂಚಿನಲ್ಲಿರುವ ಸಿಬ್ಬಂದಿಗೆ ಸ್ಥಳೀಯವಾಗಿ, ಇನ್ನು ಸೇವೆ ದೀರ್ಘಕಾಲ ಇರುವವರಿಗೆ ಧಾರವಾಡದಿಂದ ಹುಬ್ಬಳ್ಳಿ ಹುಬ್ಬಳ್ಳಿಯಿಂದ ಧಾರವಾಡ ಠಾಣೆ ಹಾಗೂ ಒಂದೇ ಕಢ ಬಿಡುಬಿಟ್ಟಿದ್ದವರನದನು ಮುಲಾಜಿಲ್ಲದೇ ಎತ್ತ.ಗಡೆ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್
ವಿವಿಧ ಠಾಣೆಗಳಲ್ಲಿ 6 ರಿಂದ 7 ವರ್ಷಗಳಿಂದ ಬೀಡು ಬಿಟ್ಟಿರುವ ಕಾನ್‌ಸ್ಟೆಬಲ್, ಹವಾಲ್ದಾರ್, ಎಎಸ್ಐವಳ ವರ್ಗಾವಣೆಗೆ ಕಡ್ಡಾಯ ಮಾಡಿದ್ದಾರೆ ಈ ಮೊದಲು ಆಯುಕ್ತರು ನಾಲ್ಕು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಎಲ್ಲ ಸಿಬ್ಬಂದಿಯ ಮಾಹಿತಿ ನೀಡುವಂತೆ ಎಸಿಪಿ ಹಾಗೂ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದರು. 4 ರಿಂದ 5 ವರ್ಷ ದವರನ್ನು ಮಾಡಿದರೆ ಸಿಬ್ಬಂದಿ ಹೆಚ್ಚಾಗುತ್ತಾರೆ ಎನ್ನುವ ಕಾರಣಕ್ಕೆ ಈಗ ಅದು ,6 ರಿಂದ 7 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣೆ ಹೂಡಿರುವವರನ್ನ ಮಾತ್ರ ವರ್ಗಾವಣೆಗೆ ಒತ್ತು ನೀಡಿದ್ದಾರೆ.
ಇನ್ನು ಅವಳಿ ನಗರದಲ್ಲಿ ನಾಲ್ಕು ಸಂಚಾರ ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಂದಲೇ ವೃತ್ತಿ ಬದುಕು ಆರಂಭಿಸಿರುವ ಅವರು, ಹವಾಲ್ದಾರ್, ಎಎಸ್ಐ, ಎಸ್ಐ ಆಗಿ ಪದೋನ್ನತಿ ಹೊಂದಿದ್ದಾರೆ. ಕಮಿಷನರೇಟ್‌ನ 14 ಠಾಣೆಗಳಲ್ಲಿಯೂ ನಾಲ್ಕು ವರ್ಷಕ್ಕಿಂತ ಮೇಲ್ಟಟ್ಟವರಿದ್ದಾರೆ.
ಒಂದೇ ಠಾಣೆಯಲ್ಲಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳೀಯವಾಗಿ ಹಿಡಿತ ಸಾಧಿಸಿದ್ದರು ಎಂಬ ಹಿನ್ನೆಲೆಯಲ್ಲಿ ಹೆಚ್ಚು ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾರೆ. ಕೂಡಲೇ ಆಯಾ ಪೊಲೀಸ್ ಠಾಣಾ ಪಿಐ ಅವರಲ್ಲಿ ವರದಿ ಮಾಡಿಕೊಳ್ಳಲು ಸಹ ಸೂಚನೆ ನೀಡಿದ್ದಾರೆ