ನವಲಗುಂದ; ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೈತರ ಶೋಷಣೆಯಾಗಿದ್ದು ಇದುವರೆಗೆ ಮಹದಾಯಿ ಯೋಜನೆ ಆರಂಭವಿಲ್ಲ, ರೈತರಿಗೆ ಸಮಸ್ಯೆಗೆ ಸ್ಪಂದನೆವಿಲ್ಲ- ದೆಹಲಿಯ ರೈತ ಸಂಘಟನೆ ಮುಖ್ಯಸ್ಥ ದೀಪಕ್ ಲಂಬಾ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ರೈತ ವಿರೋಧಿ ಆಡಳಿತದ ವಿರುದ್ಧ 1980 ರ ದಶಕದಲ್ಲಿ ಮಾಡಿದ ಹೋರಾಟದಲ್ಲಿ ನವಲಗುಂದದ ರೈತ ವೀರಪ್ಪ ಲಕ್ಕುಂಡಿ, ಹುತಾತ್ಮಗೊಂಡು 41 ವರ್ಷ ಕಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ರೈತ ನಾಯಕ ದಿ.ಬಾಬಾಗೌಡ ಪಾಟೀಲರ ವೇದಿಕೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರೈತ ಸೇನೆ, ರೈತ ಸೇನೆ ಕರ್ನಾಟಕ, ಉತ್ತರ ಕರ್ನಾಟಕ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನಿತರ ರೈತ ಸಂಘಟನೆಗಳ ಸಹಯೋಗದಲ್ಲಿ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಪಂಜಾಬಿನ ರೈತ ಹರ್ನೆಕ್ ಸಿಂಗ್, ಕೋಡಿಹಳ್ಳಿ ಚಂದ್ರಶೇಖರ, ಕುರುಬರು ಶಾಂತಕುಮಾರ ಸೇರಿದಂತೆ ಇನ್ನಿತರ ನಾಯಕು ಸಹ ಮಾತನಾಡಿದರು.
ಅಂದು ರೈತ ವಿರೋಧಿ ಕೃಷಿ ಕಾಯಿದೆ ರದ್ದುಗೊಳಿಸುವುದು, ಮಹದಾಯಿ ಕಳಸಾ ಬಂಡೂರಿ ಯೋಜನೆ ತ್ವರಿತಗತಿಯಲ್ಲಿ ಜಾರಿಗೊಳಿಸುವುದು, ರೈತರ ಮೇಲೆ ಹಾಕಿರುವ ಎಲ್ಲ ಪ್ರಕರಣ ಕೈಬಿಡುವುದು, ಹೋರಾಟದಲ್ಲಿ ಪ್ರಾಣತೆತ್ತ ರೈತರನ್ನು ಹುತಾತ್ಮರಾದರು. ಆದರೂ ಸಹ ಇದುವರಗೆ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಕಡೆಗಣಿಸಲಾಗುತ್ತದೆ. ಇದೇ ವೇಳೆ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ತಿರ್ಮಾಣ ಕೈಗೊಳ್ಳಲಾಯಿತು.
ಕರ್ನಾಟಕ ರೈತ ಸೇನೆಯ ಮುಖಂಡ ಶಂಕರ ಅಂಬಲಿ, ಶಂಕರಗೌಡ ಪಾಟೀಲ್, ಪ್ರವೀಣ ಯರಗಟ್ಟಿ, ಸೇರಿದಂತೆ ಮುಂತಾದವರು ಇದ್ದರು.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …