ಧಾರವಾಡ ; ಕುಡಿಯಲಿಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯಿಂದಲೇ ಮಗನನ್ನು ಕೊಲೆ ಮಾಡಿದ ಘಟನೆ ನಗರದ ತೆಲಗರ ಓಣಿಯಲ್ಲಿ ತಡರಾತ್ರಿ ನಡೆದಿದೆ. ಬಸವರಾಜ ಹಿರೇಕುಂಬಿ ಎಂಬಾತ ಪ್ರತಿದಿನ ಸಾರಾಯಿ ಕುಡಯಲಿಕ್ಕೆ ಹಣಕ್ಕಾಗಿ ತಂದೆಯನ್ನ ಪಿಡಿಸುತಿದ್ದ ಎನ್ನಲಾಗಿದ್ದು ಹಣಕ್ಕಾಗಿ ತಂದೆ ಮಗನ ನಡುವೆ ಜಗಳವಾಗಿದೆ. ಅದೇ ಜಗಳ ವಿಕೋಪಕ್ಕೆ ಹೋಗಿ ಮಂಗಳವಾರ ತಡರಾತ್ರಿ ತಂದೆ ಪಕೀರಪ್ಪ ಹಿರೇಕುಂಬಿ ಹಾರೇಕೋಲಿನಿಂದ ಮಗನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.ಗಂಭೀರವಾಗಿ ಗಾಯಾಳು ಬಸವರಾಜ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗಿ ಸಾವನ್ನಪ್ಪಿದ್ದಾನೆ. ಆರೋಪಿ ಫಕೀರಪ್ಪನನ್ನ ಬಂಧಿಸಲಾಗಿದೆ. ಈ ಕುರಿತು ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತಿದ್ದಾರೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …