Breaking News

ಸಿಎಂ ಯಡಿಯೂರಪ್ಪ ಬದಲಾವಣೆ ಆಗಲಿದ್ದಾರೆ ನಳಿನ್ ಕುಮಾರ್ ಕಟೀಲ್ ವಿಡಿಯೋ ವೈರಲ್

Spread the love

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಸಿಎಂ ಬದಲಾವಣೆ ಫಿಕ್ಸ್ ಎನ್ನುವಂತಾಗಿದೆ.
ತುಳುವಿನಲ್ಲಿ ವ್ಯಕ್ತಿಯೊಬ್ಬರ ಜೊತೆ ಕಟೀಲ್ ಮಾತನಾಡಿದ್ದು, ಈ ಸಂಭಾಷಣೆಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ ಎಂದು ತಮ್ಮ ಆಪ್ತರೊಬ್ಬರ ಬಳಿ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ.
ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ
ಈ ಮೂಲಕ ನಾಯಕತ್ವ ಬದಲಾವಣೆಗೆ ಸುಳಿವು ಸಿಕ್ಕಂತಾಗಿದ್ದು, ಅವರದ್ದೇ ಧ್ವನಿ ಆಗಿದ್ರೆ ನಳಿನ್ ಕುಮಾರ್ ಕಟೀಲ್ ಸಿಕ್ಕಿಬಿದ್ರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಹೈಕಮಾಂಡ್ ನಿಂದ ಅಧಿಕೃತ ಆದೇಶ ಬರುವ ಮುನ್ನ ಆಪ್ತರ ಬಳಿ ಕಟೀಲ್ ಬಾಯಿ ಬಿಟ್ಬಿಟ್ರಾ ಎಂಬ ಪ್ರಶ್ನೆಗಳು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಳೀನಕುಮಾರ ಕಟೀಲ್ ಅವರು ನಾನು ಅದು ಮಾತನಾಡಿದ್ದಲ್ಲ ಅದೊಂದು ಪೇಕ್ ಅಡಿಯೋ ಈ ಕುರಿತು ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!