ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿನ ಕಿಂಗ್ ಪಿನ್ ಎಂದು ಹೇಳಲಾಗಿರುವ ನರೇಶ್ ಗೌಡ ಇಂದು ಶಿರಾ ಪಟ್ಟಣಕ್ಕೆ ಅಗಮಿಸಿದ ವೇಳೆ ಕೆಲ ಯುವಕರು ಅದ್ಧೂರಿಯಾಗಿ ಸ್ವಾಗತಿಸಿದರು. ಶಿರಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ ನರೇಶ್ ಗೌಡರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ನಡೆಸಿದರು.
ನರೇಶ್ ಗೌಡನಿಗೆ ಅದ್ಧೂರಿ ಸ್ವಾಗತಇತ್ತೀಚೆಗಷ್ಟೇ ಸಿಡಿ ಪ್ರಕರಣದ ಕಿಂಗ್ಪಿನ್ ಎಂದು ಹೇಳಲಾದ ನರೇಶ್ ಗೌಡಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈವರೆಗೂ ಈತ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.ನರೇಶ್ ಗೌಡ ಶಿರಾದಲ್ಲಿ ರಾಜಕೀಯವಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾನೆ ಎನ್ನಲಾಗ್ತಿದೆ.
