ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ
ಅವಳಿ ನಗರಗಳ ಸೇರಿದಂತೆ ವಿವಿಧೆಡೆ ಕಡೆಯ ಕಲಾವಿದರಿಗೆ ಆದಿರಂಗ ಕಲಾ ಶಾಲೆ ಒಂದು ಉತ್ತಮ ವೇದಿಕೆ ಕಲ್ಪಿಸಿದ್ದು, ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನ್ನೂರ ಮಠದ ಶ್ರೀಕೃಷ್ಣ ಸಂಪಗಾವಕರ್ ಗುರೂಜಿ ಹೇಳಿದರು.
ಗುರು ಇನ್‌ಸ್ಟಿಟ್ಯೂಟ್ ಮತ್ತು ತಮಿಳುನಾಡಿನ ನೈವೇಲಿಯ ಎನ್‌ಎಲ್‌ಸಿ ಸಂಸ್ಥೆಗಳು ನಗರದ ಆದಿರಂಗ ಕಲಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಟನೆ, ಸಂಗೀತ ಮತ್ತು ನೃತ್ಯ ಕಲೆಗಳ ಬೇಸಿಕ್ ಕೋರ್ಸ್ ಕಲಿಕಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಸ್ಥಳೀಯವಾಗಿ ಸಿಕ್ಕಿರುವ ಅವಕಾಶ ಬಳಸಿಕೊಂಡು ಉತ್ತಮ ಕಲಾವಿದರಾಗಿ, ನಾಗರಿಕರಾಗಿ ದೇಶಕಟ್ಟುವ ಕೆಲಸ ಮಾಡಬೇಕು’ ಎಂದರು.
ಗುರು ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಯಶವಂತ ಸರದೇಶಪಾಂಡೆ ಮಾತನಾಡಿ ‘ಮುಂಬರುವ ದಿನಗಳಲ್ಲಿ ಆದಿರಂಗ ಕಲಾ ಶಾಲೆಯಲ್ಲಿ ನಟನೆ, ಸಂಗೀತ ಮತ್ತು ನೃತ್ಯ ಕಲೆಗಳ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಿಗೆ ಬೇಕಾಗುವ ವಿವಿಧ ತರಬೇತಿ ನೀಡಲಾಗುವುದು. ಹುಬ್ಬಳ್ಳಿ– ಧಾರವಾಡ ಮತ್ತು ಸುತ್ತಮುತ್ತಲಿನ ಜನ ಕಲಾ ತರಬೇತಿಗಾಗಿ ಇನ್ನು ಮುಂದೆ ಬೆಂಗಳೂರು ಹಾಗೂ ಮುಂಬೈಗೆ ಹೋಗುವ ಅಗತ್ಯವಿಲ್ಲ’ ಎಂದರು.
ನಟನೆ ವಿಭಾಗದ ಮುಖ್ಯಸ್ಥ ವಿಶ್ವನಾಥ ಕುಲಕರ್ಣಿ, ಸಂಗೀತ ತರಗತಿಗಳ ನಿರ್ವಾಹಕಿ ಡಾ. ಗಾಯತ್ರಿ ದೇಶಪಾಂಡೆ, ನೃತ್ಯ ಗುರು ಲಾಸ್ಯ ಶಿವಪ್ರಕಾಶ, ಇನ್‌ಸ್ಟಿಟ್ಯೂಟ್‌ನ ಜೀವನ್ ಫರ್ನಾಂಡಿಸ್, ಪ್ರದೀಪ ಮುಧೋಳ, ಮಲ್ಲಿಕಾರ್ಜುನ ಮುಂತಾದವರಿದ್ದರು.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …