Breaking News

ಮುಖಂಡೆ ಶೋಭಾ ಕಮತರ ನೇತೃತ್ವದಲ್ಲಿ ವಾರ್ಡ ನಂಬರ್ 63 ರ ಗುರು ಸಿದ್ದೇಶ್ವರ ಕಾಲೋನಿಯಲ್ಲಿ ಲಸಿಕಾಕರಣ

Spread the love

ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯಾ ಅವರ ಸಹಕಾರದಿಂದ ಮೊದಲ ಹಂತದ ವ್ಯಾಕ್ಸಿನೇಶನ್ ಅಭಿಯಾನ ವಾರ್ಡ್ ನಂಬರ್ 63 ರ ಗುರು ಸಿದ್ದೇಶ್ವರ ಕಾಲೋನಿಯಲ್ಲಿ ನಡೆಯಿತು.
ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಶೋಭಾ ಕಮತರ ಅವರ ನೇತೃತ್ವದಲ್ಲಿ ನಡೆದ ಲಸಿಕೆ ಅಭಿಯಾನದಲ್ಲಿ ಗುರುಸಿದ್ದೇಶ್ವರ ಕಾಲೋನಿಣ ಸಂತೋಷನಗರದ ಬೀದಿಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಚಿಂದಿ ಆಯುವವರು ಸೇರಿದಂತೆ ಮುಂತಾದ ಜನರಿಗೆ ಸುಮಾರು 168 ಜನರಿಗೆ ಕೋವಿಶೀಲ್ಡ್ ಲಸಿಕೆ (ಆನ್‌ಸೈಟ್ ಬಲ್ಕ್ ವ್ಯಾಕ್ಸಿನ್) ವಿತರಿಸಲಾಯಿತು. ಇನ್ನೂ ವಿವಿಧ ಹಂತಗಳಲ್ಲಿ ಲಸಿಕೆ ವಿತರಣೆ ಮಾಡುವ ಉದ್ದೇಶ ಹೊಂದಿದ್ದು, ವಿವಿಧ ಬಡಾವಣೆಯ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಶೋಭಾ ಕಮತರ ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ತಾಲೂಕು ಆಸ್ಪತ್ರೆ ವೈದ್ಯೆ ಭಾರತಿ ರಾಠೋಢ, ಜೈನ್ ಸಮಾಜದ ಉಪಾಧ್ಯಕ್ಷ ವಿಮಲ ತಾಳಿಕೋಟಿ,
ಯಲ್ಲಪ್ಪ ಸಂಗೇನಹಳ್ಳಿ,
ಮನೋಹರ ವಾಲಿ, ಶಕೀಲ್ ಅಮ್ಮದ ಮೋಸಳಿ, ಮಂಜು ಗೋಂದಕರ, ಯಲ್ಲಪ್ಪ ಸಗ್ಗೆನಹಳ್ಳಿ, ಡಾ. ಭಾರತಿ ರಾಥೋಡ, ಪುಶ್ಪಾ ಒಳಗುಂದಿ, ಗಾಯತ್ರಿ ಪೋಳ, ಪ್ರಭಾ ಸುಂದಾಳ, ದಾದಿಯರುಗಳಾದ ಶೃತಿ ಹಬೀಬ್, ನಬ್ರತಾ ಬಾಕಳೆ, ನಾರಾಯಣ ಬಗಾಡೆ ಸೇರಿದಂತೆ ಮುಂತಾದವರು ಇದ್ದರು.


Spread the love

About gcsteam

    Check Also

    ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ*

    Spread the loveಹುಬ್ಬಳ್ಳಿ ಮಾ.3: ಇಂದು ಚಿಟಗುಪ್ಪಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ 5 ವರ್ಷದೊಳಗಿನ ಮಕ್ಕಳಿಗೆ …

    Leave a Reply