ಬೆಳಗಾವಿ: ನಮ್ಮ ತಾಯಿ ನಿಧನರಾದ ಮೇಲೆ ತಾಯಿ ಮತ್ತು ತಂದೆ ಪ್ರತಿಷ್ಠಾನ ಮಾಡಿ, ಅದರ ಮೂಲಕ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಈ ಕಾರ್ಯವನ್ನು 18 ವರ್ಷಗಳಿಂದ ಸೇವೆ ಮಾಡಿಕೊಂಡ ಬರಲಾಗುತ್ತಿದೆ. ನಮ್ಮ ತಂದೆ – ತಾಯಿ ಹಾಗೂ ಅಭಿಮಾನಿಗಳ ಸವಿ ನೆನಪಿಗಾಗಿ ಅಂದಿನಿಂದ ಇಂದಿನವರೆಗೂ ರಕ್ತದಾನ, ದೇಹದಾನ, ನೇತ್ರದಾನ, ಬಡ ವಿದ್ಯಾರ್ಥಿಗಳಿಗೆ ಸಹಾಯ, ಎಸ್ ಎಸ್ ಎಲ್ ಸಿಯಲ್ಲಿ 90. ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಹಣ ನೀಡುತ್ತ ಬರಲಾಗಿದೆ. ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ರೈತರು, ವೈದ್ಯರು, ಪೊಲೀಸರಿಗೆ ಅಮ್ಮಾ ಪ್ರಶಸ್ತಿ ನೀಡುತ್ತ ಬರಲಾಗಿದೆ. 2022 ರಲ್ಲಿ ಅಂತರಾಷ್ಟ್ರೀಯ ಅಮ್ಮಾ ಪ್ರಶಸ್ತಿಯನ್ನು ನೀಡಲಾಗುವುದು. ಜೊತೆಗೆ ಸಮಾಜ ಸೇವೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು.
