ನಾಟಕ, ಸಂಗೀತ, ಹಾಗೂ ನೃತ್ಯ ತರಬೇತಿ ಜು. ೧೫ ರಿಂದ ಆರಂಭ
ಹುಬ್ಬಳ್ಳಿ ; ತಮಿಳುನಾಡಿನ ನೈವೇಲಿಯ ಎನ್ ಎಲ್ ಮತ್ತು ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ ನಗರ ದ ಲೋಹಿಯಾ ನಗರದ ಆದಿ ರಂಗ ಕಲಾ ಶಾಲೆಯಲ್ಲಿ ನಾಟಕ, ಸಂಗೀತ, ಹಾಗೂ ನೃತ್ಯ ತರಬೇತಿ ಜು. ೧೫ ರಿಂದ ಹಮ್ಮಿಕೊಳ್ಳಲಾಗಿದೆ.
ಪ್ರತಿಯೊಬ್ಬ ಮಕ್ಕಳಲ್ಲಿರುವ ಕಲೆ, ,ನೃತ್ಯ ಯೋಗ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ವಿವಿಧೆಡೆಯಿಂದ ನುರಿತ ಕಲಾವಿದರು ಆಗಮಿಸಲಿದ್ದಾರೆ. ಆದಿ ರಂಗ ಕಲಾ ಶಾಲೆಯಲ್ಲಿ ನಾಟಕ, ಸಿನಿಮಾ, ಟಿವಿಯಲ್ಲಿ ಅಭಿನಯಿಸಲು ತರಬೇತಿಯನ್ನು ಹುಬ್ಬಳ್ಳಿ ರಂಗಕರ್ಮಿ ವಿಶ್ವನಾಥ ಕುಲಕರ್ಣಿ ನೀಡುವರು. ಖ್ಯಾತ ಹಿಂದುಸ್ತಾನಿ ಗಾಯಕಿ ವಿದುಷಿ ಡಾ.ಗಾಯತ್ರಿ ದೇಶಪಾಂಡೆ ಅವರು ಗಾಯನ,ವಾದನ, ಸುಗಮ ಸಂಗೀತ ತರಬೇತಿ ನೀಡುವರು. ಆದಿ ರಂಗ ಕಲಾ ಶಾಲೆಯ ನೃತ್ಯ ಪಟು ಶಿವಪ್ರಕಾಶ ಅವರು ಭರತನಾಟ್ಯ ಸೇರಿದಂತೆ ವಿವಿಧ ಪ್ರಕಾರಗಳನ್ನು ಕಲಿಸುವರು.ಆಸಕ್ತರು ಜೀವನ್ ಫರ್ನಾಂಡೀಸ್ ಮೊಬೈಲ್ (9731518999), ಪ್ರದೀಪ ಮುಧೋಳ ( 9741616546) ಅವರನ್ನು ಸಂಪರ್ಕ ಮಾಡಿ ಹೆಸರನ್ನು ನೊಂದಾಯಿಸಬಹುದು ಎಂದು ನಟ, ನಿರ್ದೇಶಕ ಹಾಗೂ ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಮುಖ್ಯಸ್ಥ ಯಶವಂತ ಸರದೇಶಪಾಂಡೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ .