ಹುಬ್ಬಳ್ಳಿ: ಕಾನೂನು ಮಹಾವಿದ್ಯಾಲಯ ವ್ಯಾಪ್ತಿಯ
ಕಾನೂನು ಪದವಿ ಅವೈಜ್ಞಾನಿಕ ಫಲಿತಾಂಶ ಕೈಬಿಡಬೇಕು ಎಂದು ಆಗ್ರಹಿಸಿ ನವನಗರದ ಕಾನೂನು ಮಹಾವಿದ್ಯಾಲಯದಲ್ಲಿಂದು ಎಸ್ ಎಫ್ ಐ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು .
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಕ್ರಿ ಲಾ ಕಾಲೇಜು, ಕೆಎಲ್ಇ ಲಾ ಕಾಲೇಜು ಹಾಗೂ ಹುರಕಡ್ಲಿ ಸೇರಿದಂತೆ ಎಲ್ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೋವಿಡ್ ನಿಯಮದ ಹಿನ್ನೆಲೆಯಲ್ಲಿ ಬಹುತೇಕ ತರಗತಿಗಳನ್ನು ಪರೀಕ್ಷೆ ನಡೆಸದೇ ಹಿಂದಿನ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ. ಆದರೆ ಈ ವಿದ್ಯಾರ್ಥಿಗಳು ಮಾತ್ರ ಈ ನಿರ್ಧಾರದಲ್ಲಿ ಅನ್ಯಾಯವಾಗಿದೆ ಎಂದು ದೂರುತ್ತಿದ್ದಾರೆ.ಅಲ್ಲದೆ ಮೊದಲ ಹಾಗೂ ತೃತೀಯ ಸೆಮಿಸ್ಟರ್ ಫಲಿತಾಂಶ ಆಧರಿಸಿ ಫಲಿತಾಂಶ ಪ್ರಕಟಿಸಬೇಕು. ಅದನ್ನು ಬಿಟ್ಟು ತೃತೀಯ ಸೆಮಿಸ್ಟರ್ ಒಂದೇ ಮಾನದಂಡದ ಮೇಲೆ ಫಲಿತಾಂಶ ಪ್ರಕಟಿಸಿರುವುದು ಸರಿಯಲ್ಲ. .ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸೆಮಿಸ್ಟರ್ ಆಧಾರದ ಮೇಲೆ ನಾಲ್ಕನೇ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಬೇಕಿತ್ತು. ಆದರೆ ಕಾನೂನು ವಿಶ್ವವಿದ್ಯಾಲಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತೃತೀಯ ಸೆಮಿಸ್ಟರ್ ಒಂದನ್ನೇ ಗಣನೆಗೆ ತೆಗೆದುಕೊಂಡು ಫಲಿತಾಂಶ ಹೊರಡಿಸಿದೆ. ಇದರಿಂದ ರಾಜ್ಯಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ರಾಜ್ಯ ಕಾನೂನು ವಿಶ್ವವಿದ್ಯಾಲಯ ಮೊದಲ ಮೂರು ಸೆಮಿಸ್ಟರ್ ಗಣನೆಗೆ ತೆಗೆದುಕೊಂಡು ಫಲಿತಾಂಶ ಹೊರಡಿಸಲಿ. ಇಲ್ಲವಾದರೆ ಪರೀಕ್ಷೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ನಿರ್ಧಾರದಿಂದ ನಮಗೆ ಅನ್ಯಾಯವಾಗಿದೆ. ಕೋವಿಡ್ ನಿಯಮಾವಳಿಯ ಪ್ರಕಾರ, ಎಲ್ಲರನ್ನೂ ಉತ್ತೀರ್ಣರನ್ನಾಗಿ ಮಾಡಲಿ ಅಥವಾ ಪರೀಕ್ಷೆ ನಡೆಸಲಿ ಎಂಬುದು ವಿದ್ಯಾರ್ಥಿ ಮುಖಂಡರಾದ ರೇಖಾ ಹೊಸೂರು ಅವರ ಆಗ್ರಹವಾಗಿದೆ.
