ಹುಬ್ಬಳ್ಳಿ: ಸಾಕಷ್ಟು ಗೊಂದಲ, ಆಕ್ಷೇಪಣೆ ಹಾಗೂ ತಕಾರರು ನಡುವೆಯೂ ನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ತಡರಾತ್ರಿ ಪ್ರಕಟಿಸಲಾಗಿದ್ದು, ಒಟ್ಟು 8,11,632 ಮತ ಚಲಾಯಿಸುವ ಹಕ್ಕು ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಒಟ್ಟು 82 ವಾರ್ಡ್‌ಗಳಿದ್ದು, 4,03,657 ಪುರುಷರು, 4,07,891 ಮಹಿಳೆಯರು ಮತ್ತು 84 ಇತರ ಮತದಾರರು ಇದ್ದಾರೆ. 33ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ 13,648 ಮತದಾರರು ಇದ್ದಾರೆ. ಇದರಲ್ಲಿ 6,809 ಪುರುಷರು ಹಾಗೂ 6,839 ಮಹಿಳಾ ಮತದಾರರು ಸೇರಿದ್ದಾರೆ. 79ನೇ ವಾರ್ಡ್‌ನಲ್ಲಿ ಕಡಿಮೆ 5,924 ಜನ ಮತದಾರರು ಪಟ್ಟಿಯಲ್ಲಿದ್ದಾರೆ. 2,976 ಪುರುಷ ಹಾಗೂ 2,978 ಮಹಿಳಾ ಮತದಾರರಿದ್ದಾರೆ. ಈ ಎರಡೂ ವಾರ್ಡ್‌ಗಳಲ್ಲಿ ಇತರ ಮತದಾರರು ಇಲ್ಲ. ಈಗಾಗಲೇ ಕೇಲ ವಾರ್ಡ್ ಗಳ ವಿಂಗಡನೆ ವೇಳೆ ಅವೈಜ್ಞಾನಿಕವಾಗಿ ಮಾಡಿದರೆ ತಕಾರರು ನಡುವೆಯೂ ಅಂತಿಮ ಪಟ್ಟಿ ಸಿದ್ಧವಾಗಿದೆ.
Check Also
ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕೈ ಅಭ್ಯರ್ಥಿ ವಿನೋದ ಅಸೂಟಿಗೆ ಹಿನ್ನಡೆ
Spread the loveಗೆಲುವು ಸಾಧಿಸುತಿದ್ದಂತೆ ದೆಹಲಿಗೆ ತೆರಳಿದ ಪ್ರಲ್ಹಾದ್ ಜೋಶಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ನೂತನ ಸಂಸದರು …