ಜಿ.ಪಂ ಸದಸ್ಯ ಯೋಗೀಶ್​​ ಗೌಡ ಕೊಲೆ ಪ್ರಕರಣ; ಮತ್ತೆ ಸಿಬಿಐ ವಿಚಾರಣೆಗೆ ಆಗಮಿಸಿದ ಮಲ್ಲಮ್ಮ, ಕರಿಗಾರ

Spread the love

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್​​ ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರಿಗೆ ಸಿಬಿಐ ವಿಚಾರಣೆಗೆ ಬರುವಂತೆ ಸೂಚನೆ ನೀಡಿತ್ತು.
ಸಿಬಿಐ ತನಿಖೆಗೆ ಹಾಜರಾದಕರಿಗಾರ, ನಾಗರಾಜ ಗೌರಿ, ಮಲ್ಲಮ್ಮ, ಬಸವರಾಜ ಮುತ್ತಗಿಈ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಗೆ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಕರಿಗಾರ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ವಿಚಾರಣೆಗಾಗಿ ಆಗಮಿಸಿದ್ದಾರೆ‌‌. ಈಗಾಗಲೇ ಹಲವು ಬಾರಿ ಕರಿಗಾರ ಮತ್ತು ನಾಗರಾಜ ಗೌರಿ ಸಿಬಿಐ ವಿಚಾರಣೆ ಎದುರಿಸಿದ್ದಾರೆ.ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧನ ಹಿನ್ನೆಲೆಯಲ್ಲಿ ಕರಿಗಾರ ಹಾಗೂ ನಾಗರಾಜ ಗೌರಿ ಅವರನ್ನು ಸಿಬಿಐ ಮತ್ತೆ ವಿಚಾರಣೆಗೆ ಕಡೆದಿರುವುದು ಕುತೂಹಲ‌ ಕೆರಳಿಸಿದೆ.
ಸಿಬಿಐ ವಿಚಾರಣೆಗಾಗಿ ತೆರಳುವಾಗ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕರಿಗಾರ, ವಿಚಾರಣೆಗೆ ಕರೆದಿದ್ದಾರೆ ಬಂದಿದ್ದೇನೆ ಎಂದಷ್ಟೇ ಹೇಳಿ ಮುನ್ನಡೆದರು.ಪ್ರಮುಖ ಆರೋಪಿ ಬಸವರಾಜ ಮುತ್ತಗಿ ವಿಚಾರಣೆಗೆ ಹಾಜರು:ಶಿವಾನಂದ ಕರಿಗಾರ, ನಾಗರಾಜ ಗೌರಿ ಅವರ ಜೊತೆಗೆ ಸಿಬಿಐ ಪೊಲೀಸ್​ ತನಿಖೆಯಲ್ಲಿ ಪ್ರಮುಖ ಆರೋಪಿಯಾದ ಬಸವರಾಜ ಮುತ್ತಗಿ ಹಾಗೂ ಮೃತ ಯೋಗೇಶ್​​ ಪತ್ನಿ ಮಲ್ಲಮ್ಮ ಅವರನ್ನು ಕೂಡ ಸಿಬಿಐ ವಿಚಾರಣೆಗೆ ಕರೆದಿತ್ತು.ವಿಚಾರಣೆಗೆ ಹೋಗುವಾದ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಮುತ್ತಗಿ, ನಾನು ಕೂಡ ಓರ್ವ ಲಾಯರ್ ಆಗಿದ್ದು, ಎಲ್ಲವನ್ನು‌ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈಗಾಗಲೇ ತಡವಾಗಿದೆ. ಬಂದು ಮಾತನಾಡುತ್ತೇನೆಂದು ತೆರಳಿದರು.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply