Breaking News

ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್ ಇನ್ನಿಲ್ಲ

Spread the love

ಮುಂಬೈ: ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್‌ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಒಂದು ವಾರದ ಹಿಂದೆಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಖಾರ್‌ ಉಪ ನಗರದ ಹಿಂದೂಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ‌
ಕಳೆದ ಜೂನ್ 6 ರಂದು ಇದೇ ರೀತಿ ಉಸಿರಾಟದ ತೊಂದರೆಯಿಂದಾಗಿ ದಿಲೀಪ್ ಕುಮಾರ್ ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹತ್ತು ದಿನಗಳ ಹಿಂದೆ ಗುಣಮುಖರಾಗಿ ಅವರು ಮನೆಗೆ ತೆರಳಿದ್ದರು.
ಉಸಿರಾಟ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ವಯಸ್ಸು ಮತ್ತು ಇತ್ತೀಚೆಗಿನ ಅನಾರೋಗ್ಯದ ಸಮಸ್ಯೆಯನ್ನು ಗಮನಿಸಿದ ಕುಟುಂಬದ ಸದಸ್ಯರು ಮುನ್ನೆಚ್ಚರಿಕೆ ಕ್ರಮವಾಗಿ ದಿಲೀಪ್ ಕುಮಾರ್ ಅವರನ್ನು ಆಸ್ಪತ್ರೆ ದಾಖಲಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


Spread the love

About Karnataka Junction

[ajax_load_more]

Check Also

ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ

Spread the loveಹುಬ್ಬಳ್ಳಿ: ನಗರದ ಸಂಸ್ಕಾರ ಇಂಗ್ಲಿಷ್ ಮಿಡಿಯಂ ಶಾಲೆಯ ಯುಕೆಜಿ ಮಕ್ಕಳಿಗೆ ಬೀಳ್ಕೋಡುವ ಸಮಾರಂಭ ಇಂದು ಜರುಗಿತು. ಇದೇ …

Leave a Reply

error: Content is protected !!