ಹುಬ್ಬಳ್ಳಿ :- ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ ಅಂದ್ರೆ ನಮ್ಮ ಪಕ್ಷಕ್ಕೆ ಡಿಮ್ಯಾಂಡ್ ಇದೆ ಅಂತ ಅರ್ಥ.
ಕಾಂಗ್ರೆಸ್ ಪಕ್ಷಕ್ಕೆ ಈಗ ಬಹಳ ಡಿಮ್ಯಾಂಡ್ ಬಂದಿದೆ.ಎಂದು
ಮಾಜಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ನಗರದಲ್ಲಿಂದು,ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ಅವರು,
ಜನ ಕಷ್ಟದಲ್ಲಿದ್ದಾರೆ ಅವರಿಗೆ ನಾವು ಸಹಾಯ ಮಾಡಬೇಕು.ಎಲ್ಲರೂ ಸೇರಿ ಪಾರ್ಟಿ ಅಧಿಕಾರಕ್ಕೆ ತರೋ ಕೆಲಸ ಮಾಡಬೇಕು.
ಚುನಾವಣೆಗೆ ಇನ್ನು 2 ವರ್ಷ ಬಾಕಿ ಇದೆ
ಅದರ ಬಗ್ಗೆ ಈಗಲೇ ಮಾತನಾಡುವುದು ಸೂಕ್ತವಲ್ಲ.ನಾವು ಮಾತಾಡೋದು ಸಹ ಸೂಕ್ತವಲ್ಲ,ಪಕ್ಷದಲ್ಲಿ ಅಧ್ಯಕ್ಷರು, ಸಿಎಲ್ ಪಿ ನಾಯಕರು ಈಗಾಗಲೇ ಆ ಬಗ್ಗೆ ಹೇಳಿದ್ದಾರೆ.ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದೇ ಫೈನಲ್.ಸಿಎಂ ರೇಸ್ ನಲ್ಲಿ ನೀವಿದ್ದೀರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ.
ರೇಸೇ ನಡದಿಲ್ಲ ಅಂದಮೇಲೆ ನಾನೇನು ಹೇಳಲಿ ಅದರ ಬಗ್ಗೆ ಮಾತನಾಡುವುದು ಸೂಕ್ತ ವಲ್ಲ ಎಂದರು.
ಮಾಜಿ ಸಚಿವರಾದ ಎ ಎಮ್ ಹಿಂಡಸಗೇರಿ, ಸಂತೋಷ ಲಾಡ್ ರವರು, ಮಾಜಿ ಸಂಸದ ಪ್ರೊ ಐ ಜಿ ಸನದಿ, ಶಾಸಕಿ ಶ್ರೀಮತಿ ಕುಸುಮಾ ಶಿವಳ್ಳಿಯವರು, ಹುಬ್ಬಳ್ಳಿ ಧಾರವಾಡ ಮಹಾನಗರ ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅನೀಲ ಕುಮಾರ ಪಾಟೀಲ್, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರಾದ ಅಲ್ತಾಪ್ ಹಳ್ಳೂರು ಹಾಗೂ .
ಬ್ಲಾಕ್ ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಅಧ್ಯಕ್ಷರು, ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.
.
