ಸಚಿವ ಶ್ರೀರಾಮುಲು ಹೆಸರಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಆರೋಪ- ಆಪ್ತ ಸಹಾಯಕ ರಾಜು ಬಂಧನ

Spread the love

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೆಸರಿ‌ನಲ್ಲಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವ ಗಂಭೀರ ಆರೋಪದ ಮೇಲೆ ಸಚಿವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಚಿವ ಶ್ರೀರಾಮುಲು ಪಿಎ ರಾಜು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ನೀಡಿದ ದೂರಿನ ಮೇರೆಗೆ ಸಚಿವರ ಪಿಎ ರಾಜು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಸಚಿವರು ಹಾಗೂ ಸಿಎಂ ಕಚೇರಿ ಹೆಸರಿನಲ್ಲಿ ಅಕ್ರಮ ಹಣ ವಸೂಲಿ ಆರೋಪ ಸಂಬಂಧ ಸಿಸಿಬಿಗೆ ದೂರುಗಳು ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ಕಲೆ ಹಾಕಿದ್ದು, ಇಂದು ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿಯೇ ರಾಜುನನ್ನು ಅರೆಸ್ಟ್‌ ಮಾಡಿದ್ದಾರೆ.ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜೊತೆ ರಾಜು ಗುರುತಿಸಿಕೊಂಡಿದ್ದರು.


Spread the love

About Karnataka Junction

    Check Also

    ಶರೀಫ್ ಸಾಬ್ ಮೇಲೆ ಪಾಟಿಗಲ್ಲು ಹಾಕಿ ಕೊಲೆ

    Spread the loveಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯ ಮೇಲೆ ಪಾಟಿಗಲ್ಲು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ …

    Leave a Reply

    error: Content is protected !!