Breaking News

ವಿದೇಶಿ ಜಾತಿತಳಿಯ ನಾಯಿ ತರಿಸಿಕೊಡುವುದಾಗಿ ಯುವತಿಗೆ 2.25 ಲಕ್ಷ ರೂ.

Spread the love

ಹುಬ್ಬಳ್ಳಿ: ಧಾರವಾಡದ ಓರ್ವರಿಗೆ ಅಪರಿಚಿತನು ಸೈಬೀರಿಯನ್‌ ಹಸ್ಕಿ ತಳಿಯ ನಾಯಿಯನ್ನು ವಿದೇಶದಿಂದ ಮನೆಗೆ ತಲುಪಿಸುವುದಾಗಿ ನಂಬಿಸಿ, ಆನ್‌ಲೈನ್‌ ಮೂಲಕ 2.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಧಾರವಾಡದ ಯುವತಿಯು ಸೈಬೀರಿಯನ್‌ ಹಸ್ಕಿ ತಳಿಯ ನಾಯಿ ಖರೀದಿಸಲು ಗೂಗಲ್‌ ಕ್ರೋಮ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಸಂಪರ್ಕಕ್ಕಾಗಿ ದೊರೆತ ಮೊಬೈಲ್‌ಗೆ ವಾಯ್ಸ ಕರೆ ಮಾಡಿ ವಿಚಾರಿಸಿದಾಗ, ಅಶಿಶ ಹಂಡಾ ಎಂಬಾತ ಸೈಬೀರಿಯನ್‌ ತಳಿಯ ನಾಯಿಯನ್ನು ಕಾರ್ಗೋ ಫ್ಲೈಟ್‌ ಕಳುಹಿಸಿ, ಕಾನ್ಪುರ ಏಜೆನ್ಸಿ ಮೂಲಕ ಮನೆಗೆ ತಲುಪಿಸುವುದಾಗಿ ನಂಬಿಸಿದ್ದಾನೆ.
ನಂತರ ವಿವಿಧ ಚಾರ್ಜ್‌ಗಳ ರೂಪದಲ್ಲಿ ಮೇ 28ರಿಂದ ಜೂ. 3ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಂದ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Karnataka Junction

    Check Also

    ಲಾ & ಆರ್ಡರ್ ಎಡಿಜಿಪಿ ಆರ್‌ ಜೀತೇಂದ್ರ ಅಸಮಾಧಾನ

    Spread the loveಹುಬ್ಬಳ್ಳಿ: ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. …

    Leave a Reply

    error: Content is protected !!