ಹುಬ್ಬಳ್ಳಿ: ಹಿರೋಜಮ್ ಆಧರಿಸಿದ ಪೋಗರು ಕವರ್ ಸಾಂಗ್ ಜುಲೈ 4 ರಂದು ಶಾಬುಖಾನ್ ಅವರ ಯೂಟ್ಯೂಬ್ ಚಾಲನನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಮಂಜು ಜೀವಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಆಲ್ಬಂ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಹಾಡಿನ ಛಾಯಾಗ್ರಹಣವನ್ನು ಸಚಿನ್ ಎಸ್ ಪಿ ಮಾಡಿದ್ದು, ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಾಯಕ ನಟನಾಗಿ ಶಾಬುಖಾನ ಅಭಿಯನ ಮಾಡಿದ್ದರೇ, ತನ್ವಿ ಎಸ್ ಜೆ, ಭಾಗ್ಯಶ್ರೀ, ವಿದ್ಯಾ, ಕಿರಣ, ವಿನಾಯಕ, ರೀಷಿ, ಮಂಜುನಾಥ, ರೋಹನ್, ರಫೀಕ್, ರಾಹುಲ್, ಸಾಯಿ, ಶಾಹಿದ್, ಸೋಹನ್, ಸಮೀರ್ ಸೇರಿದಂತೆ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ನೃತ್ಯ ಸಂಯೋಜನೆಯನ್ನು ಅಜಯ ಜೈಕೃಷ್ಣ ಅವರು ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಜಯ ಜೈಕೃಷ್ಣ, ಶಾಬುಖಾನ್, ಅಲ್ಲಾವುದ್ದೀನ್ ಸೇರಿದಂತೆ ಮುಂತಾದವರು ಇದ್ದರು.
Check Also
ಮಹದಾಯಿಗಾಗಿ ಚಿತ್ರರಂಗ ಒಕ್ಕಟ್ಟಾಗಿ ಹೋರಾಟ ಮಾಡುತ್ತದೆ- ನಟ ಶಿವರಾಜ್ ಕುಮಾರ್
Spread the loveಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ …