Breaking News

ಸಾರಿಗೆ ನೌಕರರ ಕುಟುಂಬಸ್ಥರಿಂದ ಪ್ರತಿಭಟನೆ-ಕೋಡಿಹಳ್ಳಿ ಚಂದ್ರಶೇಖರ

Spread the love

ಬೆಂಗಳೂರು : ಕರ್ನಾಟಕ ಸರ್ಕಾರ ಇದ್ದಕ್ಕಿದ್ದ ಹಾಗೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಎಸ್ಮಾ) ಜಾರಿ ಮಾಡಿದೆ. ಪ್ರತಿಭಟನೆಗೆ ನೌಕರರು ಬರದಿದ್ದರೆ, ಅವರ ಮ ಕುಟುಂಬಸ್ಥರು ಬರುತ್ತಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕಾರಣವಿಲ್ಲದೆ, ನೌಕರರನ್ನು ವಜಾ ಮಾಡುತ್ತಿದೆ. ಇದು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯಡಿ ಬರುತ್ತಾ?, ಇದು ಸರ್ವಾಧಿಕಾರಿ ಧೋರಣೆ ಅಲ್ಲವಾ? ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದು, ನೌಕರರ ಕುಟುಂಬಸ್ಥರು ಪ್ರತಿಭಟನೆ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ನೌಕರರ ಕುಟುಂಬಸ್ಥರು ಪ್ರತಿಭಟನೆ ಮಾಡಿದರೆ ಯಾವ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಕೋಡಿಗಹಳ್ಳಿ ಚಂದ್ರ ಶೇಖರ್ ಮತ್ತೊಂದು ಪ್ರಶ್ನೆ ಎಸೆದಿದ್ದು ಸವದಿಯವರು ಉಪವಾಸ ಸತ್ಯಾಗ್ರಹ ಮಾಡುತ್ತಿರುವವರನ್ನು ನನ್ನ ಕುಟುಂಬದವರು ಎಂದು ಹೇಳುತ್ತಾರೆ. ನೌಕರರನ್ನು ವಜಾ ಮಾಡುವಾಗ ಇದು ನೆನಪಿನಲ್ಲಿ ಇರಲಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಾರಿ ಯಾವ ನೌಕರನೂ ಸರ್ಕಾರಕ್ಕೆ ನಷ್ಟವಾಗದಂತೆ ಕೆಲಸ‌ ಮಾಡುತ್ತಾನೆ. ಆದ್ರೆ‌ ಆತನ ಕುಟುಂಬಸ್ಥರು ರಸ್ತೆಗಿಳಿದ ಪ್ರತಿಭಟನೆ ಮಾಡ್ತಾರೆ. ಸತ್ಯಾಗ್ರಹಕ್ಕೆ ಖಂಡಿತಾ ಮುಂದಾಗ್ತೇವೆ. ಈ ಬಗ್ಗೆ ಕಮಿಟಿ ಮೀಟಿಂಗ್‌ ಮಾಡಿ ಸಾರಿಗೆ ನೌಕರರ ಕುಟುಂಬಸ್ಥರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಪರಿಹರಿಸಿಕೊಳ್ಳುತ್ತೇವೆ ಎಂದು ಕೋಡಿಹಳ್ಳಿ ಹೇಳಿದ್ದಾರೆ.’ಫಸಲ್ ಭೀಮಾ’ದಿಂದ ಅದಾನಿಗೆ ಮಾತ್ರ ಲಾಭ:ಪ್ರಕೃತಿಯ ವಿಕೋಪದಿಂದ ಬೆಳೆ ನಷ್ಟ ಆಗುತ್ತಿದ್ದು, ಕೃಷಿ ವಲಯದ ಬಹಳ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಭಾರತ ಸರ್ಕಾರ ಬೆಳೆ ವಿಮೆ ಜಾರಿಗೊಳಿಸಿತ್ತು. ವಿಮೆ ನೀತಿ ಸರಿಯಿರಲಿಲ್ಲ ಎಂಬ ರೈತರ ಒತ್ತಾಯ ಹಿನ್ನೆಲೆ ಪ್ರಧಾನಿ‌ ಮೋದಿ ಫಸಲ್ ಭೀಮಾ ಎಂಬ ಕಾರ್ಯಕ್ರಮ ಮಾಡಿದರು. ಆದರೆ ಅದು ಒಂದು ಕಂಪನಿಗೆ ಪೂರಕವಾಗಿ ಮಾಡಿರುವಂತಿದೆ ಎಂದು ಆರೋಪಿಸಿದರು.ಫಸಲ್ ಭೀಮಾದಿಂದ ಅದಾನಿ ಗ್ರೂಪ್​ಗೆ ಮಾತ್ರ ಲಾಭವಾಗುತ್ತಿದೆ. ಪ್ರತಿಯೊಂದು ಪಹಣಿಗೆ ಸಂಬಂಧಪಟ್ಟ ಹಾಗೆ ದಾಖಲೆ ಇರಬೇಕು, ದಾಖಲೆ ಇದ್ದರೆ ಮಾತ್ರ ಆ ರೈತ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಸಾಧ್ಯ. ಆದರೆ ಈ ಯೋಜನೆಯಿಂದ ಅದಾನಿ ಸೇರಿದಂತೆ ಇ‌ನ್ನುಳಿದ 15 ಕಂಪನಿಗಳಿಗೆ ಲಾಭ ಹೋಗುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ರೈತರಿಗೆ ಕಾನೂನು ಸಡಿಲಿಕೆ ಮಾಡಬೇಕು ಎಂದು ಆಗ್ರಹಿಸಿದರು.


Spread the love

About Karnataka Junction

[ajax_load_more]

Check Also

ಅಂದಾನಿಮಠ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ಸಂತಾಪ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ …

Leave a Reply

error: Content is protected !!