ಕೋವಿಡ್ ನಿಂದ ಮೃತಪಟ್ಟ 115 ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡಿದ ಸಚಿವ ಬೈರತಿ ಬಸವರಾಜ್.

Spread the love

https://youtu.be/N_M9bVGCfgs

ಕೆ.ಆರ್. ಪುರ: ಮಹಾಮಾರಿ ಕೋವಿಡ್ ಗೆ ರಾಜ್ಯವೆ ನಲುಗಿ ಸಾವು ನೋವುಗಳು ಉಂಟಾಗಿದ್ದು, ರಾಜ್ಯದಲ್ಲೆ ಮೊದಲ ಬಾರಿಗೆ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ರವರು 115 ಕುಟುಂಬಗಳಿಗೆ ತಲಾ ಒಂದು ಲಕ್ಷದಂತೆ ಒಂದು ಕೋಟಿ ಹದಿನೈದು ಲಕ್ಷ ರೂ ವಿತರಣೆ ಮಾಡಿದ್ದಾರೆ.

ಕೆ.ಆರ್.ಪುರ ಸರ್ಕಾರಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಕೇಂದ್ರ ಸಚಿವ ಸದಾನಂದಗೌಡ ಚಾಲನೆ ನೀಡಿದ್ದು, ಉಪ ಮುಖ್ಯಮಂತ್ರಿ,ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ‌ ಸಚಿವ ಆರ್ .ಅಶೋಕ್, ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಎಸ್.ಟಿ. ಸೋಮಶೇಖರ್, ಲಕ್ಷಣ್ ಸವದಿ ಮತ್ತಿತರ ಮುಖಂಡರುಗಳು ಭಾಗವಹಿಸಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಕೋವಿಡ್ ಎರಡನೇ ಅಲೆ ಲಾಕ್ ಡೌನ್ ಸಂದರ್ಭದಲ್ಲಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಾದ್ಯಂತ ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ್ದು, ಅದೇ ಸಂದರ್ಭದಲ್ಲಿ ಕೆ.ಆರ್.ಪುರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು ಕೊಟ್ಟ ಮಾತಿನಂತೆ ಇಂದು ಮೊದಲ ಹಂತವಾಗಿ 115 ಕುಟುಂಬಗಳಿಗೆ ತಲಾ ಒಂದು ಲಕ್ಷದಂತೆ ಒಂದು ಕೋಟಿ ಹದಿನೈದು ಲಕ್ಷ ರೂ ಗಳನ್ನು ಚೆಕ್ ಮೂಲಕ ವಿತರಿಸಿದ್ದು, ರಾಜ್ಯಾದ್ಯಂತ ಯಾರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಅಂತವರ ಕುಟುಂಬಗಳಿಗು ಒಂದು ಲಕ್ಷ ರೂ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಬಳಿ ಚರ್ಚಿಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದ್ದಾರೆ. ಯಾವಗ ಸಮಸ್ಯೆಗಳು ಬರುತ್ತವೋ ಆ ಸಮಯದಲ್ಲಿ ಸಾರ್ವಜನಿಕರ ಸಹಾಯಕ್ಕೆ ನಿಲ್ಲವರೆ ನಿಜವಾದ ನಾಯಕ ಎಂದು ಮೋದಿ ಅವರು ಹೇಳಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು. ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ 19 ದಿಂದ ಮೃತಪಟ್ಟ ಕುಟುಂಬ ಸದಸ್ಯರ ನೆರವಿಗಾಗಿ ಸಚಿವ ಬೈರತಿ ಬಸವರಾಜ್ ಅವರ ಒಂದು ಲಕ್ಷ ರೂ.ಗಳ ಸಹಾಯ ಮಾಡುವ ಮೂಲಕ ಆರ್ಥಿಕವಾಗಿ‌ ಸಂಕಷ್ಟಕ್ಕೆ ಸಿಲುಕಿದವರ ಜೀವನಕ್ಕೆ ಆಸರೆಯಾಗಿದ್ದಾರೆ‌ ಎಂದರು. ಇನ್ನೂ ಕರ್ನಾಟಕ‌ ಜನ ಕರೋನದಿಂದ ತತ್ತರಿಸುತ್ತಿದ್ದ‌ ಸಮಯದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬಂದು ಇಂಜೆಕ್ಷನ್ ಮತ್ತು ಔಷಧಗಳನ್ನು ಆಕ್ಸಿಜನ್ ಪೂರೈಕೆಯನ್ನು ತ್ವರಿತವಾಗಿ ನೀಡುವ ಮೂಲಕ ‌ಹಲವು ಜನರ ಪ್ರಾಣ ಉಳಿಸುವ ಕಾರ್ಯ ಆಗಿದೆ ಎಂದು ತಿಳಿಸಿದರು. 23 ಲಕ್ಷ ರೆಮಿಡಿಸಿವಿಯರ್ ಉತ್ಪಾದನೆ ಇದ್ದಿದ್ದನ್ನು 50 ಲಕ್ಷ ಉತ್ಪಾದನೆಗೆ ಏರಿಕೆ ಮಾಡಿದ್ದೆವೆ ಎಂದರು.

ಬಸವರಾಜ್ ಬೊಮ್ಮಾಯಿ ಮಾತನಾಡಿ, ಸಚಿವ ಬಸವರಾಜ್ ಅವರ ಕೈ ಕಾಕತಾಳಿ ಎಂತೆ ಮೃತರ ಕುಂಟುಂಬಗಳಿಗೆ ಒಂದು ಲಕ್ಷ ರೂ.ಗಳು ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಕರೋನಾ ದಿಂದ ಸಾವಿನಪ್ಪಿದ ಕುಟುಂಬದ ವರಿಗೆ ಒಂದು ಲಕ್ಷ ವನ್ನು ಸರ್ಕಾರ ಘೋಷಣೆ ಮಾಡಿದೆ, ಕೋವಿಡ್ ಎರಡನೇ ಅಲೆ ಬಹಳಷ್ಟು ಸಾವು ನೊವು ಉಂಟು ಮಾಡಿದೆ. ನಮ್ಮ ಸರ್ಕಾರ
24 ಸಾವಿರ ಆಕ್ಸಿಜನ್ ಬೆಡ್ ನಿರ್ಮಾಣ ಮಾಡಿದೆ , ೫ ಸಾವಿರ ವೆಂಟಿಲೇಶನ್ ಬೆಡ್ಗಳು ವ್ಯವಸ್ಥೆ ಮಾಡಿದ್ದೆವೆ, ಕೋವಿಡ್ ನಂತರ ಬ್ಲಾಕ್ ಫಂಗಸ್ ಬಂತು, ಕೋವಿಡ್ ನಿಂದ ಮೃತ ಪಟ್ಟ ಬಡ ಕುಟುಂಬದವರಿಗೆ ಮಾನವಿಯತೆ ಯಿಂದ ಆರ್ಥಿಕ ಸಹಾಯ ಮಾಡಬೇಕು ಎಂದು ಬಸವರಾಜ್ ಮುಂದೆ ಬಂದಿರುವುದು ದೇವರು ಮೆಚ್ಚು ಕೆಲಸ ಎಂದರು. ನಂತರ‌ ಸುಖ ಬಂದಾಗ ಎಲ್ಲರೂ ಬರುತ್ತಾರೆ, ಸಂತೋಷ ಬಂದಾಗಲೂ ಬರುತ್ತಾರೆ ಆದರೆ ಕಷ್ಟ ಬಂದಾಗ ಯಾರು ಬರುವುದಿಲ್ಲ, ನಿಮ್ಮ ಕಷ್ಟಕ್ಕೆ ನಾನಿದ್ದೆನೆ ಎಂದು ಸಚಿವ ಬೈರತಿ ಅವರು ಬಂದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಬಸವರಾಜ್ ಅವರ ತಂದೆ ತಾಯಿ ಅವರು ಬಸವರಾಜ್ ಅಂತ ಹೆಸರು ಇಟ್ಟು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಯಾಕಂದರೆ ಬಸವಣ್ಣನವರಂತೆ ಕೆಆರ್ ಪುರಂನಲ್ಲಿ ಬಸವರಾಜ್ ಅವರು ಸಮಾಜಸೇವೆ ಮಾಡುತ್ತಿದ್ದಾರೆ.ಸಂಕಷ್ಟಕ್ಕೆ ಸಿಲುಕಿದವರ ಜೀವನಕ್ಕೆ ಆಸರೆಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಲಕ್ಷ ಆಹಾರ ಕಿಟ್ ಗಳನ್ನು ನೀಡಿದ್ದಾರೆ. ಕ್ಷೇತ್ರದ ಕೋವಿಡ್ ಬಲಿಯಾದ 115 ಕುಟುಂಬಕ್ಕೆ ಸುಮಾರು ಒಂದು ಕೋಟಿ 15ಲಕ್ಷ ತಮ್ಮ ಸ್ವಂತ ಹಣವನ್ನು ನೀಡುವ ಮೂಲಕ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.


Spread the love

Leave a Reply

error: Content is protected !!