ನಗರದಲ್ಲಿ ಲಸಿಕಾ ಅಭಿಯಾನಕ್ಕೆ ಶಾಸಕ ಮುದ್ನಾಳ ಚಾಲನೆ

Spread the love

ಯಾದಗಿರಿ : ನಗರದ ರಾಠಿ ಭವನದಲ್ಲಿ ಸಾರ್ವಜನಿಕರಿಗಾಗಿ ಉಚಿತ ಲಸಿಕಾ ಅಭಿಯಾನಕ್ಕೆ ವೆಂಕಟರೆಡ್ಡಿ ಮುದ್ನಾಳ ಚಾಲನೆ ನೀಡಿದರು.
ನಂತರ ಮಾತನಾಡಿ ಕರೋನಾ ವೈರಸ್ ೨ನೇ ಅಲೆ ಪ್ರಭಾವದಿಂದ ಜನರು ಹೆಚ್ಚು ಸಂಕಷ್ಟ ಎದುರಿಸಿದರು, ಸರ್ಕಾರ ವೈರಸ್ ನಿಯಂತ್ರಿಸಲು ಸರ್ವ ರೀತಿಯ ಪ್ರಯತ್ನದಿಂದ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.
ಕೆಲವರು ಲಸಿಕೆ ಬಗ್ಗೆ ತಪ್ಪು ಭಾವನೆ ಜನರಲ್ಲಿ ಮೂಡಿಸುತ್ತಿದ್ದಾರೆ, ಇದರಿಂದ ಅನಕ್ಷರಸ್ಥರು ಲಸಿಕೆ ಪಡೆಯಲು ಹಿಂದೆಟು ಹಾಕುತ್ತಿರುವ ಹಲವಾರು ಘಟನೆಗಳು ನಾವು ಕಂಡಿದ್ದೇವೆ, ಎಲ್ಲರೂ ತಪ್ಪದೇ ಲಸಿಕೆ ಪಡೆದು, ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಟಿಚ್‌ಓ ಡಾ. ಹಣಮಂತರೆಡ್ಡಿ ಮದ್ನಿ, ಡಾ. ವಿನಿತಾ ಎಸ್,ಕೆ, ರಮೇಶ ದೊಡ್ಮನಿ, ಶರಣಗೌಡ ಬಾಡಿಯಾಳ ಸೇರಿದಂತೆ ಇತರರು ಇದ್ದರು,


Spread the love

Leave a Reply

error: Content is protected !!