Breaking News

ಹಳೆ ಹುಬ್ಬಳ್ಳಿಯಲ್ಲಿ ಇಂದ್ರಪ್ರಸ್ಥ ನಗರದಲ್ಲಿ ಬಾಗಿಲು ಕಿಡಿಕೆ ಮುರಿದು 8 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Spread the love

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ಭರತ ರಾಮಚಂದ್ರ ಸೂರ್ಯವಂಶಿ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸುಮಾರು ₹8 ಲಕ್ಷ ಮೌಲ್ಯದ 18 ತೊಲೆ ಚಿನ್ನಾಭರಣ ಕಳ್ಳತನವಾಗಿದೆ. ಕಿಟಕಿಯಿಂದ ಕೈಹಾಕಿ ಹಿಂಬಾಗಿಲು ತೆರೆದು ಒಳನುಗ್ಗಿ ಅಲ್ಮೇರಾದಲ್ಲಿದ್ದ ಆಭರಣ ಮತ್ತು ₹300 ನಗದು ದೋಚಿ ಪರಾರಿಯಾಗಿದ್ದಾರೆ. ಸೂರ್ಯವಂಶಿ ಅವರು ಹರ್ಷ ಕಾಂಪ್ಲೆಕ್ಸ್‌ನಲ್ಲಿ ರೇಡಿಯಂ ಅಂಗಡಿ ಹೊಂದಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್‌ ಕಳವು: ಹಳೇ ಹುಬ್ಬಳ್ಳಿಯ ನಾಗಲಿಂಗ ನಗರದ ಗಿರೀಶ ಶಿಂಧೆ ಮತ್ತು ರಾಜೇಶ ಪವಾರ್‌ ಎಂಬುವರ ಮನೆಯಲ್ಲಿ ತಲಾ ₹15 ಸಾವಿರ ಮೌಲ್ಯದ ಎರಡು ಮೊಬೈಲ್‌ಗಳು ಕಳ್ಳತನವಾಗಿವೆ. ಕಳ್ಳರು ಕಿಟಕಿಯಲ್ಲಿ ಕೈ ಹಾಕಿ ಮೊಬೈಲ್‌ ಫೋನ್‌ಗಳನ್ನು ದೋಚಿದ್ದಾರೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!