Breaking News

ಹುಬ್ಬಳ್ಳಿಯಿಂದ ಹೊರ ಊರುಗಳಿಗೆ ಹೋಗುವ ಬಸ್ ಗಳ ಮಾಹಿತಿ. ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಸಂಚಾರ

Spread the love

ಹುಬ್ಬಳ್ಳಿ : ಹಾವೇರಿ,ರಾಣಿಬೆನ್ನೂರು,ದಾವಣಗೆರೆ ತಡೆರಹಿತ ಬಸ್ ಗಳು, ಹಾನಗಲ್ಲ ಮತ್ತು ಸವಣೂರು ವೇಗದೂತ ಬಸ್ ಗಳನ್ನು ಹೊಸೂರು ಬಸ್ ನಿಲ್ದಾಣದಿಂದ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಳೆ ಬಸ್ ನಿಲ್ದಾಣದಲ್ಲಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಹಳೆಯ ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದ ಎಲ್ಲಾ ಗ್ರಾಮೀಣ ಸಾರಿಗೆ ಬಸ್ಸುಗಳನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ.ಇದರಿಂದ ಹೊಸೂರು ಬಸ್ ನಿಲ್ದಾಣದಲ್ಲಿ ಬಸ್ಸುಗಳ ದಟ್ಟಣೆ ಹೆಚ್ಚಾಗಿದೆ. ಅಂಕಣಗಳಲ್ಲಿ ಬಸ್ ಗಳ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಹಾವೇರಿ, ರಾಣಿಬೆಬೆನ್ನೂರು, ದಾವಣಗೆರೆ ಕಡೆಗೆ ಸಂಚರಿಸುವ ವೇಗದೂತ ಮತ್ತು ಪ್ರತಿಷ್ಟಿತ ಬಸ್ ಗಳು ಈಗಾಗಲೇ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ. ಆ ಮಾರ್ಗವಾಗಿ ಹೋಗುವ ಇತರೆ ಬಸ್ ಗಳೂ ಸಹ ಅಲ್ಲಿಂದಲೇ ಸಂಚರಿಸಿದರೆ ವಿವಿಧ ಸಾರಿಗೆ ವರ್ಗದ ಬಸ್ ಗಳು ಒಂದೇ ನಿಲ್ದಾಣದಲ್ಲಿ ಸಿಗುತ್ತವೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸಧ್ಯ ಹುಬ್ಬಳ್ಳಿಯಿಂದ ಹೊರ ಊರುಗಳಿಗೆ ಹೋಗುವ ಎಲ್ಲಾ ಬಸ್ಸುಗಳು ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಜನರಿಗೆ ತಾವು ಹೋಗುವ ಊರುಗಳ ಬಸ್ಸುಗಳ ಯಾವ ನಿಲ್ದಾಣದಿಂದ ಹೊರೆಉತಗತವೆ ಎಂಬ ಮಾಹಿತಿ ಸುಲಭವಾಗಿ ತಿಳಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಹೆದ್ದಾರಿವಾರು, ವಲಯವಾರು ವಿವಿಧ ಊರುಗಳಿಗೆ ಸಂಚರಿಸುವ ಸಾರಿಗೆಗಳನ್ನು ಒಟ್ಟಾಗಿ ಒಂದೇ ಬಸ್ ನಿಲ್ದಾಣದಿಂದ ಸಂಚರಿಸುವಂತೆ ಕ್ರಮ ವಹಿಸಲಾಗಿದೆ .
ನವಲಗುಂದ ಮತ್ತು ಗದಗ ಮಾರ್ಗವಾಗಿ ಹೋಗುವ ವೇಗದೂತ ಬಸ್ಸುಗಳು ಮತ್ತು ಎಲ್ಲಾ ಗ್ರಾಮೀಣ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4, ಶಿರಸಿ ರಸ್ತೆ, ಕಾರವಾರ ರಸ್ತೆ ಮತ್ತು ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸುವ ಎಲ್ಲಾ ವೇಗದೂತ ಮತ್ತು ಪ್ರತಿಷ್ಟಿತ ಸಾರಿಗೆ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸೂರು ಬಸ್ ನಿಲ್ದಾಣದಿಂದ ಬಸ್ಸುಗಳು ಹೋಗುವ ಊರುಗಳು:

ವೇಗದೂತ ಸಾರಿಗೆಗಳು
ಅಂಕಣ1: ನವಲಗುಂದ,ನರಗುಂದ ಮಾರ್ಗ
ಬಾಗಲಕೋಟೆ, ವಿಜಯಪುರ, ರೋಣ ಬದಾಮಿ, ಇಲಕಲ್ಲ, ಗುಳೇದಗುಡ್ಡ, ಪಂಡರಾಪುರ, ಬಾರ್ಸಿ, ಔರಂಗಬಾದ್
ಅಂಕಣ2: ಧಾರವಾಡ,ಸೌದತ್ತಿ ಮಾರ್ಗ
ಸೌದತ್ತಿ,ರಾಮದುರ್ಗ, ಜಮಖಂಡಿ, ಅಥಣಿ, ಮುಧೋಳ, ಸೋಲ್ಲಾಪುರ, ಔರಂಗಾಬಾದ್
ಅಂಕಣ3:ಗದಗ,ಕೊಪ್ಪಳ ಮಾರ್ಗ ಗದಗ,ಯಲಬುರ್ಗಾ ಕೊಪ್ಪಳ,ಗಂಗಾವತಿ,ಸಿಂಧನೂರು,ರಾಯಚೂರು, ಹೊಸಪೇಟೆ,
ಬಳ್ಳಾರಿ, ಮಂತ್ರಾಲಯ
ಅಂಕಣ:4: ಕುಷ್ಟಗಿ, ಗಂಗಾವತಿ ಮಾರ್ಗ
ಗಜೇಂದ್ರಗಡ,ಕುಷ್ಟಗಿ,ಲಿಂಗಸೂರು,ರಾಯಚೂರು,ಹೈದರಾಬಾದ್, ಯಾದಗಿರಿ,ಶಹಾಪುರ, ಕಲಬುರಗಿ,
ಗ್ರಾಮೀಣ ಸಾರಿಗೆಗಳು

ಅಂಕಣ:5 ಕಲಘಟಗಿ ನಿರಂತರ
ಅಂಕಣ6:ತಡಸ ನಿರಂತರ
ಅಂಕಣ7:ಅಂಚಟಗೇರಿ ಮಾರ್ಗ ಹುಲಿಕೊಪ್ಪ, ಮುತಗಿ,ಗಂಜಿಗಟ್ಟಿ, ಬಗಡಗೇರಿ
ಅಂಕಣ8:ವರೂರು ಮಾರ್ಗ
ಮತ್ತಿಗಟ್ಟಿ, ನಾಗನೂರು, ಸುರಶೆಟ್ಟಿಕೊಪ್ಪ
ಅಂಕಣ9:ಛಬ್ಬಿ ಕ್ರಾಸ್ ಮಾರ್ಗ
ಅರಳಿಕಟ್ಟಿ, ಎಲಿವಾಳ, ಕುಂಕೂರು, ಗುರುವಿನಹಳ್ಳಿ
ಅಂಕಣ10:ಕುಸುಗಲ್ಲ ಮಾರ್ಗ
ಹೆಬ್ಬಳ್ಳಿ, ಅಳಗವಾಡಿ ಶಿರಕೋಳ, ಸೌದತ್ತಿ
ಅಂಕಣ:11 ನಲವಡಿ ಮಾರ್ಗ
ಶಿರಹಟ್ಟಿ, ಮುಳ್ಳೊಳ್ಳಿ, ಮಲ್ಲಿಗವಾಡ, ಮಣಕವಾಡ
ಅಂಕಣ:12 ಅಣ್ಣಿಗೇರಿ ಮಾರ್ಗ
ಇಂಗಳಹಳ್ಳಿ ಕೊಂಕಣ ಕುರಹಟ್ಟಿ ಅಣ್ಣಿಗೇರಿ
ಅಂಕಣ:13:ಹೆಬಸೂರು ಮಾರ್ಗ
ಹೆಬಸೂರು, ನವಲಗುಂದ
ಅಂಕಣ:14 ಕುಂದಗೋಳ ವಲಯ
ಕುಂದಗೋಳ, ಯರಗುಪ್ಪಿ,ಸಂಶಿ, ಸಂಕ್ಲಿಪುರ,ತರ್ಲಘಟ್ಟ
ಅಂಕಣ15:ಕುಂದಗೋಳ ವಲಯ
ಗುಡೇನಕಟ್ಟಿ, ಚಾಕಲಬ್ಬಿ, ದ್ಯಾವನೂರು, ಬಸಾಪುರ,ಕೊಡ್ಲಿವಾಡ
ಅಂಕಣ:16ಕುಂದಗೋಳ ವಲಯ
ಶಿಶುನಾಳ, ಗುಡಗೇರಿ, ರಟ್ಟಿಗೇರಿ, ಲಕ್ಷ್ಮೇಶ್ವರ
ಅಂಕಣ:17 ಹುಲಗೂರು ವಲಯ
ಹಲಗೂರು, ಕಾರಡಗಿ, ಕ್ಯಾಲಕೊಂಡ
ಅಂಕಣ:18 ಗದಗ ತಡೆರಹಿತ ಸಾರಿಗೆಗಳು.

ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಬಸ್ಸುಗಳು ಹೋಗುವ ಊರುಗಳು

ಅಂಕಣ1: ಹಾವೇರಿ,ರಾಣಿಬೆನ್ನೂರು,ದಾವಣಗೆರೆ ತಡೆರಹಿತ ಮತ್ತು ಪ್ರತಿಷ್ಟಿತ ಸಾರಿಗೆಗಳು
ಅಂಕಣ2: ಶಿಗ್ಗಾವಿ, ದಾವಣಗೆರೆ ಮಾರ್ಗ
ಹಾನಗಲ್ಲ,ಸವಣೂರು
ದಾವಣಗೆರೆ, ಬೆಂಗಳೂರು, ಕೋಲಾರ, ತಿರುಪತಿ
ಅಂಕಣ3:ಶಿವಮೊಗ್ಗ,ಮೈಸೂರು ಮಾರ್ಗ
ಶಿವಮೊಗ್ಗ, ಮೈಸೂರು ಚಿಕ್ಕಮಗಳೂರು, ಹಾಸನ, ಮಡಿಕೇರಿ
ಅಂಕಣ 4:ಶಿರಸಿ, ಮಂಗಳೂರು ಮಾರ್ಗ
ಶಿರಸಿ, ಮಂಗಳೂರು, ಧರ್ಮಸ್ಥಳ, ಉಡುಪಿ ಭಟ್ಕಳ, ಇಡಗುಂಜಿ
ಅಂಕಣ5:ಯಲ್ಲಾಪುರ,ಕಾರವಾರ ಮಾರ್ಗ ಯಲ್ಲಾಪುರ, ಅಂಕೋಲ, ಕಾರವಾರ, ಮಡಗಾಂವ, ವಾಸ್ಕೋ
ಅಂಕಣ6:ಅಳ್ನಾವರ ಮಾರ್ಗ
ಪಣಜಿ,ವಾಸ್ಕೋ, ಮಡಗಾಂವ
ಅಂಕಣ10: ಧಾರವಾಡ,ಜಮಖಂಡಿ ಮಾರ್ಗ
ಜಮಖಂಡಿ, ವಿಜಯಪುರ, ಸೊಲ್ಲಾಪುರ, ಬಾರ್ಸಿ ಔರಂಗಾಬಾದ್
ಅಂಕಣ:11:ಧಾರವಾಡ,ಯರಗಟ್ಟಿ ಮಾರ್ಗ
ಚಿಕ್ಕೋಡಿ, ಈಚಲಕರಂಜಿ, ಗೋಕಾಕ, ಬನಹಟ್ಟಿ, ಮುಧೋಳ
ಅಂಕಣ:12 ಬೆಳಗಾವಿ ಮಾರ್ಗ
ಬೆಳಗಾವಿ ತಡೆರಹಿತ, ಮೀರಜ್, ಕೊಲ್ಲಾಪುರ, ವಿಶಾಲಗಡ, ಪೂನಾ, ನಾಸಿಕ್, ಶಿರಡಿ, ಪಿಂಪ್ರಿ, ನಿಗದಿ,ಮುಂಬೈ


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!