https://youtu.be/8YiUHRPI8jk
ಹುಬ್ಬಳ್ಳಿ; ನಗರದ ಹಳೆ ಹುಬ್ಬಳ್ಳಿಯ ಗುಡಿಹಾಳ ರಸ್ತೆಯ ಸುಭಾಷನಗರ ಸೇರಿದಂತೆ
ಮುಂತಾದ ಕಡೆಗಳಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕಾಂಗ್ರೆಸ್ ಸೇವಾ ದಳದ ಮುಖಂಡೆ ಜುಬೇದಾ ನಧಾಪ್ ಮುಂದಾಳತ್ವದಲ್ಲಿ ಬಡವರಿಗೆ ನೂರಾರು ಆಹಾರ ಕಿಟ್ ವಿತರಣೆ ಮಾಡ ಲಾಯಿತು.ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು
ಕಿಟ್ ಹೊಂದಿದ್ದು ಬಡವರಿಗೆ ಈ ಸಮಯದಲ್ಲಿ ಅನುಕೂ ಲವಾಗುವಂತೆ ಮಾಡಿದ್ದು ಜನರಪ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಮಾಹಾಮಾರಿ
ಕೋರನಾ ವೈರಸ್ ಸಂಕಷ್ಟದಲ್ಲಿರುವ ಹಲವಾರು ಬಡ ಕುಟುಂಬ ಗಳಿಗೆ ಆಹಾರ ಕಿಟ್ ಗಳ ಮೂಲಕ ಕರೋನಾ ಸಮರ್ಥವಾಗಿ ಎದುರಿಸಲು ಜುಬೇದಾ ನಧಾಪ್ ಹೇಳಿದರು.
ಹುಬ್ಬಳ್ಳಿ ಧಾರವಾಡ ಗ್ರಾಮಾಂತರ ಕಾಂಗ್ರೆಸ್ ಸೇವಾದಳ ಅಧ್ಯಕ್ಷೆ ಪುಷ್ಪಾಂಜಲಿ ಅರಳಿಕಟ್ಟಿ, ಮುಖಂಡರಾದ ಮೋಹನ ಹಿರೇಮನಿ, ಅಲ್ತಾಪ್ ಕಿತ್ತೂರು, ಫಾರೋಕ ಅಬೂಬನವರ,ಲಾಲ್ ಸಾಬ ನಧಾಪ್ , ಅಪಾರ ಪ್ರಮಾಣದ ಕಾರ್ಯಕರ್ತರು ಮುಂತಾದವರಿದ್ದರು.