Breaking News

ಗಂಟೆಗಟ್ಟಲೇ ಸಾಲಿನಲ್ಲಿ ನಿಂತರೂ ಜನರಿಗೆ ಲಸಿಕೆ ಸಿಗುತ್ತಿಲ್ಲ. 200 ಜನರಿಗೆ ಮಾತ್ರ ಲಸಿಕೆ ನೀಡಲು ಕಿಮ್ಸ್ ಮುಂದಾಗಿದೆ.

Spread the love

https://youtu.be/wqJXxz3fJFU

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋವಿಡ್​​ನಿಂದ ಜನತೆ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಈವರೆಗೆ ಆಕ್ಸಿಜನ್, ವೆಂಟಿಲೇಟರ್, ಬೆಡ್ ಸಮಸ್ಯೆ ಎದುರಿಸಿದ್ದ ಜನರಿಗೆ ಈಗ ವ್ಯಾಕ್ಸಿನ್ ಕೊರತೆ ಉಂಟಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಜನರು ಸಾಲಿನಲ್ಲಿ ನಿಂತು ಲಸಿಕೆಗಾಗಿ ಕಾಯುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ..ಗಂಟೆಗಟ್ಟಲೇ ಸಾಲಿನಲ್ಲಿ ನಿಂತರೂ ಜನರಿಗೆ ಲಸಿಕೆ ಸಿಗುತ್ತಿಲ್ಲ. 200 ಜನರಿಗೆ ಮಾತ್ರ ಲಸಿಕೆ ನೀಡಲು ಕಿಮ್ಸ್ ಮುಂದಾಗಿದೆ. ಈ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಆರೋಗ್ಯಾಧಿಕಾರಿಗಳು ಮೊದಲೇ ಈ ಬಗ್ಗೆ ನಮಗೆ ತಿಳಿಸಿದ್ದರೆ, ನಾವು ಇಲ್ಲಿಯವರೆಗೆ ಬರುತ್ತಿರಲಿಲ್ಲ ಎಂದು ಜನತೆ ಆರೋಗ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಜಿಲ್ಲೆಯಾದ್ಯಂತ ಈವರೆಗೂ ನೀಡಲಾದ ವ್ಯಾಕ್ಸಿನ್ ವಿವರ..21-06-2021ರಂದು ಮೊದಲನೆ ಡೋಸ್-26,456
ಎರಡನೇ ಡೋಸ್- 1,707
ಒಟ್ಟು- 28,163 ಜನರಿಗೆ ವ್ಯಾಕ್ಸಿನೇಷನ್22-06-21ರಂದು ‌ಮೊದಲನೆ ಡೋಸ್- 22,305
ಎರಡನೇ ಡೋಸ್ -1,562
ಒಟ್ಟು – 23,867
23-06-21ರಂದು ಮೊದಲನೆ ಡೋಸ್-14,364
ಎರಡನೇ ಡೋಸ್-639
ಒಟ್ಟು-15003
ಧಾರವಾಡ ಜಿಲ್ಲೆಯಲ್ಲಿ ಜೂನ್ 23ರವರೆಗೆ 3,99,182 ಜನರು ಮೊದಲನೆಯ ಡೋಸ್, 82,723 ಜನರು ಎರಡನೆಯ ಡೋಸ್ ಪಡೆದಿದ್ದಾರೆ. ಒಟ್ಟು 4,81,905 ಜನರು ವ್ಯಾಕ್ಸಿನ್ ಪಡೆದಿದ್ದಾರೆ.


Spread the love

About Karnataka Junction

[ajax_load_more]

Check Also

ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ

Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …

Leave a Reply

error: Content is protected !!