ಝೀರೋ ಟ್ರಾಫಿಕ್ ಮೂಲಕ 10 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿದ ಲಿವರ್

Spread the love

ಹುಬ್ಬಳ್ಳಿ: ಮಾನವನ ಅಂಗಾಂಗ ಕಸಿ ಮಾಡುವ ಉದ್ದೇಶದಿಂದ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಿಂದ ಹೊರಟಿದ್ದ ಅಂಗಾಂಗಳನ್ನ ಕೇವಲ ಹತ್ತು ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯವರು ನೀಡಿದ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಎಸ್.ಡಿ.ಎಂ ಆಸ್ಪತ್ರೆಯಿಂದ ಲಿವರ್ ಅಂಗವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ 16 ಕಿ.ಮೀ ಅಂತರವನ್ನು ಸಾಧ್ಯವಾದಷ್ಟು ಕಡಿಮೆ ಅವದಿಯಲ್ಲಿ, ತಲುಪಿಸುವ ಸೂಚನೆ ಮೇರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸರು, ಅಂಗಾಂಗಗಳನ್ನು ತಲುಪಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಗಿದ್ದು, ಗ್ರೀನ್ ಕಾರಿಡಾರ್ ಝೀರೋ ಟ್ರಾಫಿಕ್ ಗೆ ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ‌


Spread the love

Leave a Reply

error: Content is protected !!