Breaking News

ಹಳೇ ಹುಬ್ಬಳ್ಳಿಯ ನಾಗಲಿಂಗನಗರದಲ್ಲಿ ಮಹಿಳಾ ಮುಖಂಡೆ ಸಂಗೀತಾ ನಿವಾಸದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಜೊತೆಗೆ ವೆಬ್ ನಾರ್ ಮೂಲಕ ಸಭೆ

Spread the love

ಹುಬ್ಬಳ್ಳಿ: ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗಟ್ಟಿಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ನವದೆಹಲಿಯಿಂದ ವೆಬೆಕ್ಸ್‌ ಮೂಲಕ ಬಿಜೆಪಿ ಧಾರವಾಡ ಸೆಂಟ್ರಲ್ ಮಹಿಳಾ ಮೂರ್ಚಾ ವತಿಯಿಂದ ನಾಗಲಿಂಗನಗರದಲ್ಲಿ ಮಹಿಳಾ ಪ್ರಮುಖರ ನಿವಾಸದಲ್ಲಿ ಆಯೋಜಿಸಲಾಗಿದ್ದ 1975-77ರ ನಡುವಿನ ತುರ್ತು ಪರಿಸ್ಥಿತಿ ಅವಧಿಯನ್ನು ಕರಾಳ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು. ಅಂಬೇಡ್ಕರ್‌ ಅವರ ಮಾತುಗಳನ್ನು ನೆನಪಿಸಿಕೊಂಡ ಜೋಶಿ, ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಹೇಳಿದಂತೆ ಸಂವಿಧಾನ ಎಷ್ಟೇ ಉತ್ತಮವಿರಲಿ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗಿರದಿದ್ದರೆ ಅದು ದೇಶಕ್ಕೆ ಅಥವಾ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ ಅಥವಾ ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದರಲ್ಲಿನ ಒಳ್ಳೆಯ ಅಂಶವನ್ನು ಪಡೆದು ಆಡಳಿತ ನಡೆಸುವವರಿದ್ದರೆ ಯಾವುದೇ ಹಾನಿಯಾಗುವುದಿಲ್ಲ, ಇದರ ತಾತ್ಪರ್ಯ ವಿಷ್ಟೆ ಆಡಳಿತಗಾರರು ಒಳ್ಳೆಯವರು, ಉತ್ತಮರಾಗಿರಬೇಕು ಎನ್ನುವುದು ಎಂದು ಹೇಳಿದರು. ಮಹಿಳಾ ಮೂರ್ಚಾದ ಅಕ್ಕಮಹಾದೇವಿ ಹೆಗ್ಗಡೆ, ಸಂಗೀತಾ ಮುಂತಾದವರಿದ್ದರು.


Spread the love

About Karnataka Junction

    Check Also

    ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

    Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …

    Leave a Reply

    error: Content is protected !!