ಹುಬ್ಬಳ್ಳಿ; ಅಂತರ್ ರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಶನಿವಾರ ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಲಿಂಗರಾಜ ಅಂಗಡಿ ಯುವ ಜನರಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮ ಕುರಿತು ಕಿವಿ ಮಾತು ಹೇಳಿದರು. ನಿಟ್ಟಿನಲ್ಲಿ ನನ್ನ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ದಯವಿಟ್ಟು ಕೇಳಿ. ಧೂಮಪಾನ, ಗಾಂಜಾ ಸೇದುವುದು, ಇಂಜೆಕ್ಷನ್ ಚುಚ್ಚಿ ಕೊಳ್ಳುವುದು,ಜಗಿಯುವದು, ಕುಡಿಯುವುದು, ಮುಂತಾಗಿ ಅನೇಕ ವಿಧದಲ್ಲಿ ಮಾದಕ ವಸ್ತುಗಳ ಬಳಸಲಾಗುತ್ತದೆ. ನಮ್ಮ ದೇಶದಲ್ಲಿ ಗಾಂಜಾ , ತಂಬಾಕು ಮತ್ತು ವೈದ್ಯರ ಸಲಹೆ ಪಡೆಯದೆ ಔಷದಗಳನ್ನು ಹೆಚ್ಚಿನ ಪ್ರಮಾಣದಲ್ಲಿ. ಉಪಯೋಗಿಸುವುದು ಮಾದಕ ದ್ರವ್ಯಗಳೇ, ದಯವಿಟ್ಟು ಈ ಪದಾರ್ಥಗಳನ್ನು ಉಪಯೋಗಿಸುವುದಿಲ್ಲ ಎಂದು ನಾವು ಇಂದು ಪ್ರತಿಜ್ಞೆ ಮಾಡಿ , ಇವುಗಳಿಂದ ನಾವು ದೂರ ಇದ್ದು, ಒಳ್ಳೆಯ ಹವ್ಯಾಸಗಳಾದ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಿ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇಟ್ಟುಕೊಳ್ಳೋಣ ಎಂದು ಸಲಹೆ ನೀಡಿದರು.
