https://youtu.be/j5XvEG84j0Y
ಪಿಎಂ ಫಸಲು ಭಿಮಾ ಯೋಜನೆ ಹಣ ಬಿಡುಗಡೆಗೆ ಒತ್ತಾಯಿಸಿ ಗದಗ ಜಿಲ್ಲಾಡಳಿತ ಭವನ ಎದುರು ರೈತರ ಪ್ರತಿಭಟನೆಯನ್ನ ನಡೆಸಿದ್ರು. ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿಯನ್ನ ಸಲ್ಲಿಸಲಾಯಿತು. ಇದೇ ವೇಳೆ ಗದಗ ಜಿಲ್ಲಾಧಿಕಾರಿ ಎಂ ಸುಂದರೇಶಬಾಬು ವಿರುದ್ಧ ರೈತರ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಜನವರಿ 5 ರೊಳಗೆ ರೈತರಿಗೆ ಯೋಜನೆ ಹಣ ಕೊಡುವ ಭರವಸೆ ನೀಡಿದ್ರು.. ಆದ್ರೆ ಇದುವರೆಗೆ ಪಿಎಂ ಫಸಲು ಭೀಮಾ ಯೋಜನೆ ಹಣ ರೈತರ ಖಾತೆಗೆ ಜಮಾ ಆಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮನವಿ ಸಲ್ಲಿಸಿದ ರೈತರು, ಜುಲೈ 10 ರೊಳಗೆ ಹಣ ಜಮೆ ಆಗದಿದ್ರೆ ಡಿಸಿ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆಯನ್ನ ನೀಡಿದ್ರು.