Breaking News

ಕೋವಿಡ್​ ಸೋಂಕು ನಿಯಂತ್ರಣಕ್ಕೆ ಬಂತೆಂದು ನಿಟ್ಟುಸಿರು ಬಿಡುತ್ತಿರುವ ಸಮಯದಲ್ಲಿ ಬ್ಲ್ಯಾಕ್ ಫಂಗಸ್​ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ದೃಷ್ಟಿಹೀನತೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣ

Spread the love

ಹುಬ್ಬಳ್ಳಿ: ಲಾಕ್​ ಡೌನ್​ ಕಾರಣದಿಂದ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದರೂ, ಬ್ಲ್ಯಾಂಗ್ ಫಂಗಸ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಪ್ಪು ಫಂಗಸ್​ನಿಂದ ಕೆಲವರು ಕಣ್ಣು ಕಳೆದುಕೊಂಡರೆ, ಇನ್ನೂ ಕೆಲವರ ಪ್ರಾಣಪಕ್ಷಿ ಹಾರಿಹೋಗಿದೆ. ಪ್ರಸ್ತುತ 150 ಮಂದಿ ಬ್ಲ್ಯಾಕ್ ಫಂಗಸ್​ ರೋಗಿಗಳು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 120ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್ ಸೋಂಕಿತರಿಗೆ ಕಿಮ್ಸ್​​ನ ಇಎನ್​ಟಿ‌ ವಿಭಾಗದಿಂದ ಆಪರೇಷನ್ ಮಾಡಲಾಗಿದೆ. ಈ ಪೈಕಿ ಹತ್ತು ಜನರು ಸಂಪೂರ್ಣ ಕಣ್ಣು ಕಳೆದುಕೊಂಡು ಶಾಶ್ವತ ದೃಷ್ಠಿ ಹೀನರಾಗಿದ್ದಾರೆ. ಇದರೊಂದಿಗೆ ಬ್ಲ್ಯಾಕ್ ಫಂಗಸ್​ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾಹಿತಿ ಬ್ಲ್ಯಾಕ್​ ಫಂಗಸ್​ ಸೋಂಕಿತರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಕಣ್ಣು, ಕಿವಿ, ಮೆದುಳು ರೋಗದಿಂದ, ಇನ್ನೂ ಕೆಲವರು ಬಾಯಿ ದವಡೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಇವರಿಗೆಲ್ಲ ಚಿಕಿತ್ಸೆ ಕೊಡಿಸುವುದು ವೈದ್ಯರು ಮತ್ತು ಜಿಲ್ಲಾಡಳಿತಕ್ಕೆ ಸವಾಲಾಗಿದೆ.


Spread the love

About Karnataka Junction

[ajax_load_more]

Check Also

ಗುರುದತ್ತ ಭವನ ಹೊಟೇಲ್ ಸ್ನೇಹಿತರ ಬಳಗದ ವತಿಯಿಂದ ಅಪ್ಪು ಹುಟ್ಟು ಹಬ್ಬ ಆಚರಣೆ

Spread the loveಹುಬ್ಬಳ್ಳಿ: ಡಾ.ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟು ಹಬ್ಬವನ್ನ ನಗರದ ಗುರುದತ್ತ ಭವನ ಹೊಟೇಲ್ …

Leave a Reply

error: Content is protected !!