https://youtu.be/PFqECtnDjGs
ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಂಘದ ವಾರದ ಸಭೆಯನ್ನು ಚಿಟಗುಬ್ಬಿ ಗಾರ್ಡನ್ ನಲ್ಲಿ ಶುಕ್ರವಾರ ನಡೆಸಲಾಯಿತು. ಸಂಘದ ವಿವಿಧ ಪ್ರಮುಖ ಶಾಸನಬದ್ಧ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಕರೋನಾ ಮಹಾಮಾರಿ 2 ನೇ ಅಲೆಯ ಸಂಕಷ್ಟದ ಲಾಕ್ಡೌನ್ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸಾರಿಗೆ ಸೌಲಭ್ಯ, ಥರ್ಮಲ್ ಸ್ಕ್ಯಾನಿಂಗ್, ಕೆಲಸದ ಸಮಯ ಬೆಳಿಗ್ಗೆ 6-00 ಗಂಟೆಯಿಂದ 11-00 ಗಂಟೆವರೆಗೂ ನಿಗದಿ ,ಪರಿಷ್ಕೃತ ತುಟ್ಟಿಬತ್ತೆ , ಮಾಸ್ಕ್ , ಹ್ಯಾಂಡ್ ಗ್ಲೌಸ್, ಗಮ್ ಬೂಟ್, ಸ್ಯಾನಿಟೈಸರ್ , ಫೇಸ್ ಶೀಲ್ಡ್ ,ಮೆಡಿಸನ್ ಕಿಟ್ ಗಳು ಮುಂತಾದ ಸೌಲಭ್ಯಗಳನ್ನು ಸಂಘದಿಂದ ಪೌರಕಾರ್ಮಿಕರಿಗೆ ದೊರಕಿಸಿಕೊಡಲಾಗಿತ್ತು ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಯೋಗದ ಅಧ್ಯಕ್ಷರಿಗೆ ಪೌರಕಾರ್ಮಿಕರ ವಿವಿಧ ಹಕ್ಕೊತ್ತಾಯಗಳು, ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಒತ್ತಾಯಿಸಲಾಯಿತು.