https://youtu.be/bK_JyHiP-7E
ಹುಬ್ಬಳ್ಳಿ; 5 ಕೋ.ರೂ. ವೆಚ್ಚದಲ್ಲಿ ಸುಂದರ ಪ್ರವಾಸಿ ತಾಣವಾಗಿ ರೂಪುಗೊ ಳ್ಳುತ್ತಿರುವ ಹಾಗೂ ಹುಬ್ಬಳ್ಳಿಗೆ ಮುಕುಟಪ್ರಾಯವಾಗಲಿರುವ ಕಾರವಾರ ರಸ್ತೆಯ ಕೆಂಪಕೆರೆ ಪ್ರವಾಸಿ ತಾಣದ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಅಬ್ಬಯ್ಯಾ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.
ನಿರ್ಮಿಸಲಾಗಿರುವ ಸೇತುವೆ, ಕ್ಯಾಂಟಿನ್ ಕಟ್ಟಡ, ಪೇವರ್ಸ, ಕಾಂಪೌಂಡ್ ಕಾಮಗಾರಿಗಳನ್ನು ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಅಲ್ಲದೇ, ವಿಶಿಷ್ಟ ಪ್ರವಾಸಿ ತಾಣವಾಗಿ ಅತ್ಯಾಕರ್ಷಕವಾಗಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಆದೇಶ ಮಾಡಿದರು.