ದಾವಣಗೆರೆ; :ದೇಶದಲ್ಲಿ ಅಪರೂಪ ಎನ್ನುವಂತಹ ಕೋವಿಡ್ ಸೂಂಕಿತರಿಗೆ ಕಂಡು ಬರುವ ಎ- ನೆಕ್ ಎಂಬ ಕಾಯಿಲೆ ದಾವಣಗೆರೆಯಲ್ಲಿ ಪತ್ತೆಯಾಗಿದೆ. ದಾವಣಗೆರೆ ನಗರದ ಎಸ್ ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವೈದ್ಯರು ಈ ಪ್ರಕರಣ ಪತ್ತೆ ಹಚ್ಚಿದ್ದಾರೆ.
ಬ್ಲ್ಯಾಕ್ ಫಂಗಸ್ ರೀತಿಯಲ್ಲಿ ಒಂದು ಮಿಸ್ಸಿ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ ಒಂದು ಎ- ನೆಕ್ ಎಂಬ ಖಾಯಿಕೆ ಪತ್ತೆ ಆಗಿದೆ. ಎ- ನೆಕ್ ಎಂಬ ಕಾಯಿಲೆ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದ್ರೆ ಇದೀಗ ಈ ಖಾಯಿಲೆ ಮಕ್ಕಳಲ್ಲಿ ಮೊದಲ ಸಲ ಕಂಡು ಬಂದಿದೆ. ಎಸ್ ಎಸ್ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನವರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಸಮ್ಮುಖದಲ್ಲಿ ಮಾಹಿತಿ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಶೇಖಡಾ 60 ರಷ್ಟು ಸಾವಿನ ಸಾದ್ಯತೆ ಇದೆ, ಇಂತಹದ್ದೇ ಒಂದು ವಯಸ್ಕರ ಪ್ರಕರಣ ದೆಹಲಿ ಎಮ್ಸ್ ನಲ್ಲಿ ಪತ್ತೆ ಆಗಿತ್ತು. ಆದ್ರೆ ಮಗುವಿನಲ್ಲಿ ಕಂಡು ಬಂದಿರುವುದು ಇದೇ ಮೊದಲ ಪ್ರಕರಣವಾಗಿದೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮೂಲದ 13 ವರ್ಷ ಮಗುವಿನಲ್ಲಿ ಇಂತಹ ಲಕ್ಷಣಗಳು ಕಂಡು ಬಂದಿದ್ದು, 8 ದಿನಗಳ ಹಿಂದೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಈ ಮಗುವನ್ನು ದಾಖಲಿಸಲಾಗಿತ್ತು. ಮಗುವನ್ನು ಪರೀಕ್ಷೆ ಮಾಡಿದಾಗ ಮಿದುಳು ನಿಷ್ಕ್ರಿಯ ಹಂತದಲ್ಲಿತ್ತು. ವೆಂಟಲೇಟರ್‌ನಲ್ಲಿ ಮೂರು ದಿನ ಚಿಕಿತ್ಸೆ ಕೊಡಲಾಯಿತು. ಸ್ವಲ್ಪ ಚೇತರಿಕೆ ಕಂಡಿದ್ದು, ಐಸಿಯುನಲ್ಲಿ ಇಡಲಾಗಿದೆ. ಆಮ್ಲಜನಕ ನೀಡುವುದನ್ನು ಕೂಡ ನಿಲ್ಲಿಸಲಾಗಿದೆ.. ಮಗುವಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇದು ಕೊರೊನಾ ಸೋಂಕು ತಗಲಿದ ಗುಣ ಮುಖರಾದ ಮಕ್ಕಳಿಗೆ ಬರುವ ಕಾಯಿಲೆ ಆಗಿದ್ದು, ಈ ಮಗು ಈಗ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಹಿಮೊನೋಗ್ಲೋಬಿನ್ ಔಷಧಿ ನೀಡಿದರೇ ಚೇತರಿಕೆ ಕಂಡು ಬರುತ್ತಿದೆ. ಆದ್ರೆ ಹಿಮೊಗ್ಲೋಬಿನ್ ಔಷಧಿ ದುಬಾರಿಯಾಗಿದ್ದು, 30ಕೆಜಿ ಮಗುವಿಗೆ ಕನಿಷ್ಟ 75 ಸಾವಿರದಿಂದ ಒಂದು ಲಕ್ಷ ರೂಪಾಯಿ ಈ ಹಿಮೋಗ್ಲೋಬಿನ್ ಔಷಧಿಗೆ ವೆಚ್ಚವಾಗಲಿದೆ,
5 ಗ್ರಾಂ ಗೆ 14 ಸಾವಿರ ದರ ಇರುವ ಇಮ್ನೊಗ್ಲೊಬಿಹಿನ್ ಇಂಜೆಕ್ಷನ್ ಅನ್ನು ನೀಡಲಾಗುತ್ತಿದೆ. ಮಗುವಿನ ದೇಹದ ತೂಕಕ್ಕೆ ಅನುಗುಣವಾಗಿ ಒಂದು ಕೆಜಿಗೆ 2 ಗ್ರಾಂನಂತೆ ನೀಡಬೇಕಾಗುತ್ತದೆ ಎಂದು ಎಸ್ ಎಸ್ ಆಸ್ಪತ್ರೆಯ ಮಕ್ಕಳ ತಜ್ಞರ ಕಾಳಪ್ಪನವರ್ ಮಾಹಿತಿ ನೀಡಿದ್ರು.
