ಹುಬ್ಬಳ್ಳಿ; ನಗರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪರಿಸರ ಕಾಪಾಡಿಕೊಳ್ಳುವ ಜಾಗೃತಿ
ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಶನಿವಾರ ವಿವಿಧ ಕಾರ್ಯಕ್ರಮ ಸಹ ಜರುಗಿದವು. ಸಸಿಗಳನ್ನು ಪ್ರತಿಯೊಬ್ಬರು ನೆಡುವುದು, ದಿನಗಳ ಅಭಿಯಾನ, ಲಕ್ಷ ಸಸಿ ನೆಡುವ ಅಭಿಯಾನ, ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಿಗೆ ಚಾಲೆಂಜ ಮಾಡುವುದು ಹಾಗೂ
ಎಬಿವಿಪಿ ಕರ್ನಾಟಕ ಹಾಗೂ ಎಸ್ ಎಪ್ ಡಿ ವತಿಯಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ ಮಾಡುವುದರ ಮೂಲಕ 5 ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಎಬಿವಿಪಿ ರಾಜ್ಯ ಅಧ್ಯಕ್ಷರಾದ ಡಾ ವೀರೇಶ್ ಬಾಳೆಕಾಯಿ. ಜಿಲ್ಲಾ ಪ್ರಮುಖರಾದ ಅಶೋಕ, ನಗರ ಅಧ್ಯಕ್ಷರಾದ ವಾಗ್ಮೊಡೆ ವಿಭಾಗ ಸಂಘಟನಾ ಕಾರ್ಯದರ್ಶಿ ಗಂಗಾಧರ, ರಮೇಶ್, ನಗರ ಉಪಾಧ್ಯಕ್ಷರಾಗಿ ಶಂಕರ ಕುಂದಗೋಳ ಹಾಗೂ
ಕಾರ್ಯಕರ್ತರು ಭಾಗವಹಿಸಿದ್ದರು.
