ಕೊಪ್ಪಳ: ಪೊಲೀಸರು ಅಂದ್ರೆ ತೊಂದರೆಗೊಳಗಾದ ನಾಗರಿಕರಿಗೆ ರಕ್ಷಣೆ ಕೊಡೋರು ಅನ್ನೋದು ಎಲ್ರಗೂ ಗೊತ್ತು. ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಜೀಪಿನಲ್ಲಿ ಓಡಾಡ್ತಾರೆ. ದಾರಿ ಮಧ್ಯೆ ರಸ್ತೆ ನಡುವೆ ಜೀಪ್ ನಿಂತ್ಕೊಂಡ್ ಬಿಟ್ರೆ..?
ಆಗ ಏನ್ ಮಾಡೋದು..? ಇಂಥದ್ದೊಂದು ಸಮಸ್ಯೆ ಗುರುವಾರ ಯಲಬುರ್ಗಾದ ಸಾರ್ವಜನಿಕರ ಆಸ್ಪತ್ರೆ ಬಳಿ ನಡೆದಿದೆ. ಯಲಬುರ್ಗಾ ಸಿಪಿಐ ಸಾಹೇಬ್ರು ಕರ್ತವ್ಯದ ಮೇಲೆ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದಾರೆ. ಕೆಲಸ ಮುಗಿಸಿಕೊಂಡು ಜೀಪ್‌ನಲ್ಲಿ ಹೊರಡುವ ವೇಳೆ ವಾಹನ ಕೈ ಕೊಟ್ಟಿದೆ. ವಾಹನ ಚಾಲಕ ಮೆಕಾನಿಕ್ ಕರೆದುಕೊಂಡು ಬರಲು ಹೋಗಿದ್ದಾನೆ. ರಸ್ತೆ ನಡುವೆ ಇದ್ದ ಜೀಪ್‌ನ್ನು ಪಕ್ಕಕ್ಕೆ ನಿಲ್ಲಿಸಬೇಕೆಂದರೆ ವಾಹನ ತಳ್ಳಲು ಸುತ್ತ ಮುತ್ತ ಯಾರೂ ಇರಲಿಲ್ಲ. ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಆಗದಿರಲೆಂದು ಸಿಪಿಐ ನಾಗರೆಡ್ಡಿ ಅವರೊಬ್ಬರೇ ಬಾಹುಬಲಿ ಸಿನಿಮಾದಲ್ಲಿ ಆನೆ ರಥ ಎಳೆದಂತೆ ತಮ್ಮ ವಾಹನದ ಮುಂಭಾಗವನ್ನು ಹಿಡಿದೆಳೆದು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಪೊಲೀಸರು ಅಂದ್ರೆ ಸುಮ್ನೆನಾ..? ಹೀಗೆ ವಾಹನ ತಳ್ಳುತ್ತಿರುವುದನ್ನ ಮೊಬೈಲ್ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …