ಧಾರವಾಡ : ಕರೋನಾ ಮಹಾಮಾರಿ 2 ನೇ ಅಲೆ ಸಂದರ್ಭದಲ್ಲಾದ ಲಾಕ್ ಡೌನ್ ದಿಂದ ರಾಜ್ಯದಲ್ಲಿ ಯಾವುದೇ ರೀತಿಯ ತರಹದ ಕಾರ್ಯಕ್ರಮಗಳು ಮದುವೆ, ಮುಂಜಿವೆ, ಸರಕಾರದ ಕಾರ್ಯಕ್ರಮಗಳು ನಡೆಯದೇ ಇದ್ದ ಕಾರಣ ಪೆಂಡಾಲ ಶಾಮಿಯಾನಾ ಕಾರ್ಮಿಕರು ಹಾಗೂ ಮಾಲೀಕರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಪೆಂಡಾಲ್ ಶಾಮಿಯಾನಾ ಮಾಲೀಕರಿಗೆ ಫೆಬ್ರುವರಿಯಿಂದ ಮೇ ಅಂತ್ಯದವರೆಗೆ ತುಂಬಾ ಬ್ಯೂಸಿ ಇರುವ ಸೀಜನ್ ಆಗಿರುತ್ತದೆ. ಈ ಸಂದರ್ಭದಲ್ಲಿಯೇ ಮದುವೆ, ಗೃಹ ಪ್ರವೇಶ, ಮುಂಜಿವೆ ಮುಂತಾದ ಶುಭ ಕಾರ್ಯಕ್ರಮಗಳು ಜರುಗುತ್ತವೆ. ಈ ಸಂದರ್ಭದಲ್ಲಿಯೇ ಲಾಕಡೌನ್ ಆದ ಕಾರಣ ಬಂಡವಾಳ ಹೂಡಿ ಕೈಯಲ್ಲಿ ಯಾವುದೇ ತರಹದ ಹಣವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಕೈಲಾದ ಮಟ್ಟಿಗೆ ಕೂಲಿ ಕಾರ್ಮಿಕರಿಗೆ ಸಹಾಯ ಕೂಡ ಮಾಡಿದ್ದಾರೆ.
ಅಲ್ಲದೇ ಮಾನ್ಯ ಕೇಂದ್ರ ಸರಕಾರವು ಈಗಾಗಲೇ ನಮ್ಮ ವ್ಯಾಪಾರ ಮತ್ತು ವಹಿವಾಟು ಸಣ್ಣ ಕೈಗಾರಿಕೆ ಎಂದು ಪರಿಗಣಿಸಿದೆ. ತಾವುಗಳು ಸಹ ನಮ್ಮ ವ್ಯಾಪಾರ ಮತ್ತು ವಹಿವಾಟು ಸಣ್ಣ ಕೈಗಾರಿಕೆಗೆ ಸೇರಿಸಬೇಕೆಂದು ಹಾಗೂ ನಮಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸಹ ತಮ್ಮಲ್ಲಿ ಕೋರುತ್ತೇವೆ. ಈಗಾಗಲೇ ಮಾನ್ಯರಾದ ತಾವುಗಳು ವಿವಿಧ ಕ್ಷೇತ್ರದ ಕಾರ್ಮಿಕರಿಗೆ ಸ್ಪಂದನೆ ನೀಡಿ ಧನ ಸಹಾಯ (ಪ್ಯಾಕೇಜ್) ಮಾಡಿದ್ದು ತುಂಬಾ ಅಭಿನಂದನಾರ್ಹವಾದ ಕಾರ್ಯವಾಗಿದೆ. ಅದೇ ರೀತಿಯಾಗಿ ಶಾಮಿಯಾನಾ ಮಾಲೀಕರಿಗೆ ಧನ ಸಹಾಯದ (ಪ್ಯಾಕೇಜ) ನ್ನು ಘೋಷಣೆ ಮಾಡಿ ಆರ್ಥಿಕವಾಗಿ ಪೆಟ್ಟು ತಿಂದ ಶಾಮಿಯಾನಾ ವರ್ಗಕ್ಕೆ ಪುನಃ ಪುಟಿದೇಳಲು ಪುನಶ್ಚತನವಾಗುವಂತೆ ಕ್ರಮ ಜರುಗಿಸಬೇಕಾಗಿ ಮನವಿ ಮಾಡಿದರು.
ಶಾಮಿಯಾನಾ ಮಾಲಕರು ಆರ್ಥಿಕ ಸಂಕಷ್ಟದಲ್ಲಿರುತ್ತಾರೆ. ಸರಕಾರದಿಂದ ಸೂಕ್ತವಾದ ಪರಿಹಾರ ಮತ್ತು ಬ್ಯಾಂಕಿನ ಸಾಲದ ಸವಲತ್ತುಗಳನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಕುರಿತು ಒತ್ತಾಯ ಮಾಡಿದರು.
