https://youtu.be/DI7ek_Vrnc0
ಹುಬ್ಬಳ್ಳಿ: ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣಕ್ಕಾಗಿ ರದ್ದಾಗಿದ್ದ ಹುಬ್ಬಳ್ಳಿ–ಗಂಗಾವತಿ ಎಕ್ಸ್‌ಪ್ರೆಸ್ ವಿಶೇಷ ರೈಲು ಜೂ. 28ರಿಂದ ಪುನರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಈ ರೈಲು 29ರಿಂದ ಗಂಗಾವತಿಯಿಂದ ಸಂಚರಿಸಲಿದೆ.
ಹೊಸಪೇಟೆ– ಹರಿಹರ ವಿಶೇಷ ರೈಲು 29ರಿಂದ ಹೊಸಪೇಟೆಯಿಂದ, 30ರಿಂದ ಹರಿಹರದಿಂದ ಆರಂಭವಾಗಲಿದೆ. ಈ ರೈಲುಗಳಿಗೆ ನಿಲ್ದಾಣಗಳಲ್ಲಿಯೇ ಟಿಕೆಟ್ ಪಡೆದು ಪ್ರಯಾಣಿಸಬೇಕು.
28ರಿಂದ ಹುಬ್ಬಳ್ಳಿಯಿಂದ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು 30ರಿಂದ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲಿದೆ.
29ರಿಂದ ಕೆಎಸ್‌ಆರ್ ಬೆಂಗಳೂರಿನಿಂದ–ಹೊಸಪೇಟೆಗೆ ಮತ್ತು 30ರಿಂದ ಹೊಸಪೇಟೆಯಿಂದ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಈ ರೈಲುಗಳಲ್ಲಿ ಪ್ರಯಾಣಿಸಲು ಮುಂಗಡ ಟಿಕೆಟ್ ಪಡೆಯಬೇಕು. ಪ್ರಯಾಣಿಕರು ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯಬಾಗಿ ಪಾಲಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.