https://youtu.be/5futZOLM0Qo
ಹುಬ್ಬಳ್ಳಿ – ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ. 27ರ ಸಿದ್ದೇಶ್ವರ ನಗರದಲ್ಲಿ, ಸಾಮಾನ್ಯ ಅನುದಾನದಡಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ದಾನಮ್ಮ ಗುಡಿ ರಸ್ತೆಯ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ರಾಜಣ್ಣಾ ಕೊರವಿ, ಬಸಣ್ಣ ಹೆಬ್ಬಳ್ಳಿ, ನಂದೀಶ ವದ್ದಟ್ಟಿ ಹಾಗೂ ಇನ್ನಿತರರು ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು.