https://youtu.be/v1wdi8HHGwM
ಹುಬ್ಬಳ್ಳಿ; ಅಪ್ರತಿಮ ರಾಷ್ಟ್ರೀ ಯವಾದಿಗಳು, ಶ್ರೇಷ್ಠ ವಾಗ್ಮಿಗಳು ಮತ್ತು ಸಂಸದೀಯ ಪಟುಗಳು ಹಾಗೂ ಜನಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ದೇಶಪಾಂಡೆ ನಗರದ ಕುಂಭಕೋಣಂ ಪ್ಳಾಟ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ 5000 ರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿ,ಡಾ. ಶಾಮಪ್ರಸಾದ ಮುಖರ್ಜಿ ಅವರ ಜೀವನ ಸಾಧನೆ ಬಗ್ಗೆ ಸ್ಮರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಲಂ 370 ಯನ್ನು ತೆಗೆದುಹಾಕಿ ಯಾವ ವಿಚಾರಕ್ಕೆ ಮುಖರ್ಜಿಯವರ ಬಲಿದಾನವಾಗಿತ್ತೋ ಅವರ ಬಲಿದಾನ ವ್ಯರ್ಥವಾಗದ ಹಾಗೇ ಅವರು ಕಂಡಿದ್ದ ಅಖಂಡ ಭಾರತದ ಕನಸನ್ನು ನನಸು ಮಾಡಿದರು ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಕಿರಣ್ ಉಪ್ಪಾರ, ಮಾಜಿ ಪಾಲಿಕೆ ಸದಸ್ಯರಾದ ಲಕ್ಷ್ಮಣ ಉಪ್ಪಾರ, ಡಾ ಸಚಿನ್ ಹೊಸಕಟ್ಟೆ, ಹಿರಿಯರಾದ ದತ್ತಾತ್ರೇಯ ಕಂದುಕೂರ್, ಬಿ. ಎಲ್ ಹೆಗಡೆ, ಪಾಂಡುರಂಗ ಪವಾರ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಸಂಗಮ ಹಂಜಿ, ಶಿವಯ್ಯ ಹಿರೇಮಠ, ಅಮೋಲ್ ದೇಶ್ ಕುಲಕರ್ಣಿ ನವೀನ್, ಸಚಿನ್ ಗಾಣಗೇರ, ರಾಜು ಕಟ್ಟಿ ಮುಂತಾದವರು ಉಪಸ್ಥಿತರಿದ್ದರು