https://youtu.be/KUKhx9dx-wE
ಹುಬ್ಬಳ್ಳಿ; ನಗರದ ಗೂಡ್ ಶೆಡ್ ರಸ್ತೆ ಕುಲಕರ್ಣಿ ಹಕ್ಕಲದ ಕೆಲ ನಿವಾಸಿಗಳು ಕಾಲನಿಯಲ್ಲಿನ ಸ್ಮಾರ್ಟಸಿಟಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ದೂರು ನೀಡಿದಾಗ ಕೂಡಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅನಗತ್ಯ ವಿಳಂಬ ಮಾಡದೇ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಿ ಸಮಸ್ಯೆ ಬಗೆಹರಿಸುವಂತೆ ಕಟ್ಟುನಿಟ್ಟಾಗಿ ಶಾಸಕ ಅಬ್ಬಯ್ಯಾ ಪ್ರಸಾದ್ ಗುರುವಾರ ಸೂಚಿಸಿದರು. ಯಾವುದೇ ಕಾರಣಕ್ಕೆ ವಿಳಂಬವಾಗದಂತೆ ನೋಡಿಕೊಳ್ಳಲು ತಾಕೀತು ಮಾಡಿದ ಶಾಸಕರು ಮೇಲಿಂದ ಮೇಲೆ ತಮಗೆ ಕಾಮಗಾರಿ ಪ್ರಗತಿ ವರದಿ ನೀಡಲು ಸೂಚಿಸಿದರು. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.