ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಸಿದ್ದು ಅಭಿಮಾನಿ

Spread the love

ಕೊಪ್ಪಳ: ವಾಹನಗಳ ಮೇಲೆ, ದೇಹದ ಮೇಲೆ ಜನ ತಮ್ಮ ನೆಚ್ಚಿನ ನಟ, ನಾಯಕನ ಹೆಸರು ಅಥವಾ ಭಾವಚಿತ್ರ ಹಾಕಿಸಿಕೊಳ್ಳುವುದು ನೋಡಿರುತ್ತೇವೆ. ಆದರೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ ತಮ್ಮ ಪುತ್ರನಿಗೆ ಮಾಜಿ ಸಿಎಂ ಸಿದ್ದರಾಮಯ್ಯಅವರ ಹೆಸರು ಇಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಸಿದ್ದರಾಮಯ್ಯ ಅಂತ ಪುತ್ರನಿಗೆ ನಾಮಕರಣ ಮಾಡಿರುವ ಮಂಜುನಾಥ-ನೇತ್ರಾವತಿ ದಂಪತಿ, ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು, ನೆರಹೊರೆಯವರಿಗೆ ಊಟ ಹಾಕಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಂಜುನಾಥ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿವಿಧ ಯೋಜನೆಗಳನ್ನು ಮೆಚ್ಚಿಕೊಂಡು ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಅನೇಕ ಕಲ್ಯಾಣ ಯೋಜನೆಗಳಿಂದಾಗಿ ತಮ್ಮ ಮೊದಲ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡು, ಅದರಂತೆ ಪುತ್ರನಿಗೆ ಮಾಜಿ ಸಿಎಂ ಅವರ ಹೆಸರನ್ನು ನಾಮಕರಣ ಮಾಡಿದ್ದೇನೆ ಎನ್ನುತ್ತಾರೆ ಮಂಜುನಾಥ್‌ ಸದ್ಯ ಅಧಿಕಾರಿದಲ್ಲಿ ಇಲ್ಲದಿದ್ರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಕೆಲ ಕಾಂಗ್ರೆಸ್‌ ಶಾಸಕರು ಹೇಳಿಕೆಗಳನ್ನು ನೀಡುತ್ತಾರೆ. ಇದು ವಿಚಾರ ಹೈಕಮಾಂಡ್‌ ವರೆಗೂ ತಲುಪಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಮಂಜುನಾಥ ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.


Spread the love

Leave a Reply

error: Content is protected !!